17 ಬಾರಿ ಗರ್ಭಿಣಿ ಎಂದು ಸುಳ್ಳು ಹೇಳಿ ಹೆರಿಗೆ ರಜೆ ಜೊತೆಗೆ 98 ಲಕ್ಷ ರೂ. ಸಂಬಳ ಪಡೆದ ಮಹಿಳೆ

 17 ಬಾರಿ ಗರ್ಭಿಣಿ ಎಂದು ಸುಳ್ಳು ಹೇಳಿ ಹೆರಿಗೆ ರಜೆ ಜೊತೆಗೆ 98 ಲಕ್ಷ ರೂ. ಸಂಬಳ ಪಡೆದ ಮಹಿಳೆ


ಇಟಲಿಯ ಬಾರ್ಬರಾ ಐಯೋಲೆ ಕಳೆದ ಸುಮಾರು 24 ವರ್ಷಗಳಿಂದ ಗರ್ಭಧಾರಣೆಯ ನಾಟಕವಾಡುತ್ತಾ ಬಂದಿರುವ ಮಹಿಳೆ. ಇಲ್ಲಿಯವರೆಗೆ ತಾನು ಐದು ಮಕ್ಕಳಿಗೆ ಜನ್ಮ ನೀಡಿದ್ದೇನೆ ಮತ್ತು 12 ಗರ್ಭಪಾತಗಳಿಗೆ ಒಳಗಾಗಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.ಇದೀಗಾ ಮಹಿಳೆಯ ಕಳ್ಳಾಟ ಬಹಿರಂಗಗೊಂಡಿದ್ದು, ಪೊಲೀಸರು ಮಹಿಳೆಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಮಿಕರ ಕಾನೂನು ಪ್ರಕಾರ ಹೆರಿಗೆಯಾದ ದಿನದಿಂದ ಅಂದಾಜು 6 ತಿಂಗಳುಗಳ ಕಾಲ ವೇತನ ಸಹಿತ ರಜೆಯನ್ನು ಹೊಸ ತಾಯಂದಿರಿಗೆ ನೀಡಲಾಗುತ್ತದೆ. ಜೊತೆಗೆ ಗರ್ಭಿಣಿಯರಿಗೆ ಸರ್ಕಾರದಿಂದಲೂ ಆರ್ಥಿಕ ನೆರವು ನೀಡಲಾಗುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ ಸಂಬಳದ ಜೊತೆಗೆ 6ತಿಂಗಳು ರಜೆ ಸಿಗುವುದರಿಂದ ಮತ್ತು ಹಣಕ್ಕಾಗಿ ಗರ್ಭಿಣಿ ಎಂದು ಒಂದಲ್ಲ ಎರಡಲ್ಲ ಬರೋಬ್ಬರಿ 17 ಬಾರಿ ಸುಳ್ಳು ಹೇಳಿ 98 ಲಕ್ಷಕ್ಕೂ ಅಧಿಕ ರೂ.ಗಳನ್ನು ಬಾಚಿಕೊಂಡಿದ್ದಾಳೆ. ಇದೀಗಾ ಮಹಿಳೆಯ ಕಳ್ಳಾಟ ಬಹಿರಂಗಗೊಂಡಿದ್ದು, ಪೊಲೀಸರು ಮಹಿಳೆಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಟಾಲಿಯ ಬಾರ್ಬರಾ ಐಯೋಲೆ (50) ಕಳೆದ ಸುಮಾರು 24 ವರ್ಷಗಳಿಂದ ಗರ್ಭಧಾರಣೆಯ ನಾಟಕವಾಡುತ್ತಾ ಬಂದಿರುವ ಮಹಿಳೆ. ಇಲ್ಲಿಯವರೆಗೆ ತಾನು ಐದು ಮಕ್ಕಳಿಗೆ ಜನ್ಮ ನೀಡಿದ್ದೇನೆ ಮತ್ತು 12 ಗರ್ಭಪಾತಗಳಿಗೆ ಒಳಗಾಗಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಮೆಟ್ರೋ ವರದಿಯ ಪ್ರಕಾರ, ಐಯೋಲೆ 98 ಲಕ್ಷಕ್ಕೂ ಹೆಚ್ಚು ಸರ್ಕಾರಿ ಪ್ರಯೋಜನಗಳನ್ನು ಪಡೆದಿದ್ದಾಳೆ. ಜೊತೆಗೆ ಪ್ರತೀ ಸಾರಿ 6 ತಿಂಗಳು ಕೆಲಸಕ್ಕೂ ಹೋಗದೇ ಆರಾಮ ಜೀವನ ಕಳೆದಿದ್ದಾಳೆ.
17 ಬಾರಿ ಗರ್ಭಿಧಾರಣೆ ಎಂದು ಕಂಪೆನಿಯಿಂದ ರಜೆ ಹಾಗೂ ಸರ್ಕಾರದಿಂದ ಸಿಗುವ ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಆಕೆಯ ಮೇಲೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ನಿಜ ಬಣ್ಣ ಬಯಲಾಗಿದೆ. ಗರ್ಭಿಣಿ ಎಂದು ನಂಬಿಸಲು ಹೊಟ್ಟೆಗೆ ದಿಂಬುಗಳನ್ನು ಬಳಸುತ್ತಿದ್ದಳು. ಜೊತೆಗೆ ಗರ್ಭಧಾರಣೆ ಹಾಗೂ ಹೆರಿಗೆಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಳು. “ಆಕೆ ಒಂದು ಬಾರಿಯೂ ಗರ್ಭಿಣಿಯಾಗಿಲ್ಲ. ಇಲ್ಲಿಯವೆರೆಗೆ ಆಕೆಯ ಗರ್ಭಿಣಿಯಂತೆ ನಟಿಸಿದ್ದಾಳೆ” ಎಂದು ಆಕೆಯ ಪತಿ ಡೇವಿಡ್ ಪಿಜ್ಜಿನಾಟೊ ಕೂಡ ಆಕೆಯ ವಿರುದ್ಧ ಸಾಕ್ಷ್ಯ ನುಡಿದಿದ್ದಾನೆ. ಪೊಲೀಸರು ಆಕೆಯನ್ನು ವಶಪಡಿಸಿ ಒಂದು ವರ್ಷ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.


Comments