ಕಾರ್ತಿಕ್​​ಗೆ ಹಗ್​ ಕೊಟ್ಟು ಥ್ಯಾಂಕ್ಸ್ ಹೇಳಿದ ಸಂಗೀತಾ, ಮತ್ತೆ ಚಿಗುರೀತೆ ಸ್ನೇಹ

 ಕಾರ್ತಿಕ್​​ಗೆ ಹಗ್​ ಕೊಟ್ಟು ಥ್ಯಾಂಕ್ಸ್ ಹೇಳಿದ ಸಂಗೀತಾ, ಮತ್ತೆ ಚಿಗುರೀತೆ ಸ್ನೇಹ

ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ ಮೊದಲು ಅಸಮರ್ಥರು ಸಾಲಿನಲ್ಲಿದ್ದರು. ಆಗ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಇಬ್ಬರೂ ಲವರ್ಸ್ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ.

ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ಮಧ್ಯೆ ಹಲವು ಕಾರಣಕ್ಕೆ ಕಿರಿಕ್ ಆಯಿತು. ಇಬ್ಬರೂ ಈಗ ಬೇರೆ ಬೇರೆ ಆಗಿದ್ದಾರೆ. ಒಬ್ಬರ ಮುಖ ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಕಾರ್ತಿಕ್ ವಿರುದ್ಧ ಸಂಗೀತಾ, ಸಂಗೀತಾ ವಿರುದ್ಧ ಕಾರ್ತಿಕ್ ಆರೋಪ, ಪ್ರತ್ಯಾರೋಪ ಮಾಡುತ್ತಲೇ ಬಂದಿದ್ದಾರೆ. ಈಗ ಕಾರ್ತಿಕ್ ಮೇಲಿನ ಅಸಮಾಧಾನ ಮರೆತು ಅವರು ಹಗ್ ಕೊಟ್ಟಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ. ಇಬ್ಬರ ಮಧ್ಯೆ ಮೊದಲಿನಂತೆ ಫ್ರೆಂಡ್​ಶಿಪ್ ಬೆಳೆಯಲಿ ಎಂದು ಅನೇಕರು ಕೋರಿಕೊಂಡಿದ್ದಾರೆ.

ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ ಅವರು ಅಸಮರ್ಥರು ಸಾಲಿನಲ್ಲಿದ್ದರು. ಈ ವೇಳೆ ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಯಿತು. ಇಬ್ಬರೂ ಲವರ್ಸ್ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಇಬ್ಬರೂ ಬೇರೆ ಆದರು. ಇಬ್ಬರ ಮಧ್ಯೆ ಈಗ ದೊಡ್ಡ ಅಂತರ ಸೃಷ್ಟಿ ಆಗಿದೆ. ಕಾರ್ತಿಕ್​ನ ಸಂಗೀತಾ ಹತ್ತಿರ ಸೇರಿಸಿಕೊಳ್ಳುತ್ತಿಲ್ಲ. ‘ನಿಮ್ಮ ಜೀವನದಲ್ಲಿ ನಾನು ಯಾವಾಗಲೂ ಶನಿ ಆಗಿರ್ತೀನಿ’ ಎಂದು ಸಂಗೀತಾ ಹೇಳಿದ್ದರು.

ಫ್ರೆಂಡ್​ಶಿಪ್ ಬಗ್ಗೆ ಮಾತನಾಡಿ ಧನ್ಯವಾದ ಹೇಳೋಕೆ ಅವಕಾಶ ನೀಡಲಾಯಿತು. ಈ ವೇಳೆ ಸಂಗೀತಾ ಅವರು ಹಳೆಯದನ್ನು ಮರೆತು ಥ್ಯಾಂಕ್ಸ್ ಹೇಳಿದ್ದಾರೆ. ‘ನಾನು ಕುಗ್ಗಿದಾಗ ನೀವು ಬಂದು ಸಪೋರ್ಟ್ ಮಾಡಿದ್ರಿ. ನಾನು ಬೇರೆ ಯಾವುದಾದರೂ ಹೆಸರು ತೆಗೆದುಕೊಂಡರೆ ನನಗೆ ನಾನು ನ್ಯಾಯ ಮಾಡಿದಂತೆ ಆಗುತ್ತಿರಲಿಲ್ಲ’ ಎಂದಿದ್ದಾರೆ ಸಂಗೀತಾ. ಇದನ್ನು ಅನೇಕರು ಪ್ರಶಂಸಿದ್ದಾರೆ.


ವಿನಯ್ ಹಾಗೂ ಕಾರ್ತಿಕ್ ಹಲವು ವರ್ಷಗಳಿಂದ ಒಟ್ಟಾಗಿ ಇದ್ದಾರೆ. ಇವರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇದು ಆರಂಭ ಆಗಿದ್ದು ಹೇಗೆ ಎಂದು ಮಾತನಾಡಿದ್ದಾರೆ ಪ್ರತಾಪ್, ‘ಇಂಡಸ್ಟ್ರಿಗೆ ಹೊಸದಾಗಿ ಬಂದಾಗ ನನ್ನತ್ರ ದುಡ್ಡು ಇರುತ್ತಾ ಇರಲಿಲ್ಲ. ಮನೆಗೆ ಕರೆದು ಊಟ ಮಾಡಿಸಿ ಕಳಸ್ತಾ ಇದ್ದ. ಇವನ ಜೊತೆಗಿನ ಫ್ರೆಂಡ್​ಶಿಪ್ ಬಿಟ್ಟುಕೊಡಲ್ಲ’ ಎಂದಿದ್ದಾರೆ ಕಾರ್ತಿಕ್.

ಕಾರ್ತಿಕ್ ಹಾಗೂ ವಿನಯ್ ಹಲವು ಬಾರಿ ಕಿತ್ತಾಡಿದ್ದಿದೆ. ‘ಕಾರ್ತಿಕ್ ಜೊತೆ ಮತ್ತೆ ಮಾತನಾಡಲ್ಲ’ ಎಂದು ವಿನಯ್ ಈ ಮೊದಲು ಹೇಳಿದ್ದರು. ಆದರೆ, ಎಲ್ಲವನ್ನೂ ಮರೆತು ಇವರು ಮತ್ತೆ ಒಂದಾಗಿದ್ದಾರೆ. ಜನವರಿ 27 ಹಾಗೂ 28ರಂದು ‘ಬಿಗ್ ಬಾಸ್ ಫಿನಾಲೆ’ ನಡೆಯಲಿದೆ. ಈ ಬಾರಿ ಯಾರು ಕಪ್ ಎತ್ತುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಮೂಡಿದೆ. ಅದ್ದೂರಿಯಾಗಿ ಫಿನಾಲೆ ನಡೆಸಲು ಕಲರ್ಸ್ ಕನ್ನಡ ವಾಹಿನಿ ಪ್ಲ್ಯಾನ್ ಮಾಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು.




Comments