3 ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ, ಬಡವರ ಮಕ್ಕಳ ಬೆಳೀಬೇಕು: ಬಿಗ್ ಬಾಸ್ ಕಾರ್ತಿಕ್

 3 ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ, ಬಡವರ ಮಕ್ಕಳ ಬೆಳೀಬೇಕು: ಬಿಗ್ ಬಾಸ್ ಕಾರ್ತಿಕ್ 

ಬಿಗ್ ಬಾಸ್ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಬಹುಮಾನವಾಗಿ 50 ಲಕ್ಷ ರೂಪಾಯಿ, ಹೊಸ ಬ್ರಿಜ್ಜಾ ಕಾರು ಮತ್ತು ಬೌನ್ಸ್‌ ಎಲೆಟ್ರಿಕ್‌ ವಾಹವನ್ನು ಗಿಫ್ಟ್‌ ಆಗಿ ಪಡೆದುಕೊಂಡಿದ್ದಾರೆ. ಬಿಬಿ ಮನೆಯಿಂದ ಹೊರ ಬರುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ಸಂದರ್ಶನದಲ್ಲಿ ಬ್ಯುಸಿಯಾಗಿರುವ ಕಾರ್ತಿಕ್ ತಾಯಿಗೋಸ್ಕರ ಮನೆ ಕಟ್ಟಿಸಬೇಕು, ಸ್ವಂತ ಮನೆ ಮಾಡಬೇಕು ಅಂತ ಹೇಳಿಕೊಂಡ ಆಸೆ ಅದೆಷ್ಟೋ ಮಿಡಲ್ ಕ್ಲಾಸ್‌ ಹುಡುಗರ ಮನಸ್ಸು ಮುಟ್ಟಿಗೆ. ಇದಕ್ಕೆ ಕಿಚ್ಚ ಸುದೀಪ್‌ ಕೂಡ ಸ್ಪಂದಿಸಿದ್ದಾರೆ. 

ಕಾರ್ತಿಕ್‌ ಮಹೇಶ್ ಮೂಲತಃ ಚಾಮರಾಜ ನಗರದವರು. ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರ್ತಿಕ್‌ ಸದ್ಯ ಇರುವುದು ಬೆಂಗಳೂರಿನಲ್ಲಿ. ಕಿರುತೆರೆಯಲ್ಲೂ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಫಿನಾಲೆ ವಾರದಲ್ಲಿ ಸಹೋದರಿ ಜೊತೆ ವಿಡಿಯೋ ಕಾಲ್ ಮಾಡಿದಾಗ ಆಕೆ ಕುಳಿತುಕೊಂಡಿದ್ದ ಬ್ಯಾಗ್ರೌಂಡ್‌ನ ನೋಡಿ ಹಳ್ಳಿ ಮನೆ, ಬಡವರ ಮನೆ ಇದ್ದಂತೆ ಇದೆ ಕಾರ್ತಿಕ್ ಈ ಸಲ ಟ್ರೋಫಿ ಪಡೆದು ಸ್ವಂತ ಮನೆ ಮಾಡಬೇಕು, ತಂಗಿಗೆ ಜನಿಸಿರುವ ಗಂಡು ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ವಿಶ್ ಅಭಿಮಾನಿಗಳು ಮಾಡುತ್ತಿದ್ದರು. 

ಯಮಲೋಕ ಎಷ್ಟು ದೂರವಿದೆ ಗೊತ್ತೇ? ಈ ವಿಡಿಯೋ ಮಿಸ್ ಮಾಡದೇ ನೋಡಿ  

'9 ವರ್ಷ ಜರ್ನಿಯಲ್ಲಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯಲು ತುಂಬಾ ಕಷ್ಟ ಪಟ್ಟಿದ್ದೀನಿ. ತಂಗಿ ವಿಡಿಯೋ ಕಾಲ್ ಮಾಡಿದ ಫೋಟೋ ಮತ್ತು ನನ್ನ ಫೋಟೋ ಹಾಕಿ ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಅವರಿಗೆ ನಾನು ಹೇಳಿವುದು ಇಷ್ಟೆ...ಊರಿನಲ್ಲಿ ಇರುವ ನನ್ನ ಮಾಮ ಅವರ ಮನೆ ಅದು, ಅದು ನನ್ನ ಮನೆ ಕೂಡ. ಬೆಂಗಳೂರಿನಲ್ಲಿ ನಾನು ಇರುವುದು ಬಾಡಿ ಮನೆಯಲ್ಲಿ ಸ್ವಂತ ಮನೆ ಅಲ್ಲ. ಬಿಗ್ ಬಾಸ್ ಮನೆಯಲ್ಲಿದ್ದ ಕಾರಣ ಮೂರು ತಿಂಗಳು ಬಾಡಿಗೆ ಕಟ್ಟಿಲ್ಲ ಪಾಪ ಓನರ್ ಸುಮ್ಮನಿದ್ದಾರೆ' ಎಂದು ಕಾರ್ತಿಕ್ ಮಹೇಶ್ ಖಾಸಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ. 

ನನ್ನ ಜರ್ನಿಯಲ್ಲಿ ತುಂಬಾ ಕಷ್ಟ ಪಟ್ಟಿದ್ದೀನಿ ಹೀಗಾಗಿ ಬಡವರ ಮಕ್ಕಳು ಬೆಳೆಯಬೇಕು. ಬಡವರ ಮಕ್ಕಳ ಗೆಲ್ಲಬೇಕು, ಗೆದ್ದು ನಿಂತುಕೊಳ್ಳಬೇಕು. Dont give up ಅನ್ನೋ ಧೈರ್ಯ ಇರಬೇಕು. ಇವತ್ತಲ್ಲ ಅಂತ ನಾಳೆ ನಾಳಿದ್ದು ಸಾಧನೆ ಮಾಡೇ ಮಾಡುತ್ತೀವಿ ಎಂದಿದ್ದಾರೆ ಕಾರ್ತಿಕ್.  

 

ಅಲ್ಲದೆ ಕಿಚ್ಚ ಸುದೀಪ್ ಯಾರಿಗೂ ಕೇಳಿಸದಂತೆ ಕಾರ್ತಿಕ್ ಕಿವಿಯಲ್ಲಿ ಏನೋ ಹೇಳುತ್ತಾರೆ. 'ನೀವು ಇಂಡಿಪೆಂಡೆಂಟ್ ಮನೆ ನೋಡುತ್ತಿದ್ದೀರಾ ಅಥವಾ ಅಪಾರ್ಟ್‌ಮೆಂಟ್‌ ಎಂದು ಸುದೀಪ್‌ ಕಾರ್ತಿಕ್‌ರನ್ನು ಕೇಳುತ್ತಾರಂತೆ. ಮನೆಯಲ್ಲಿ ಅಮ್ಮ ಒಬ್ಬರೆ ಇರಬೇಕು ಹೀಗಾಗಿ ಅಪಾರ್ಟ್‌ಮೆಂಟ್ ಅಂದ್ರೆ ಜನರ ಇರ್ತಾರೆ ಆಮೇಲೆ ಸೇಫ್‌ ಇರುತ್ತದೆ ಎಂದು ಕಾರ್ತಿಕ್ ಹೇಳಿದ್ದಾರೆ. ಒತ್ತಾಯ ಇಲ್ಲ ನನ್ನ ಸ್ನೇಹಿತರು ಅಪಾರ್ಟ್‌ಮೆಂಟ್ ಹೊಂದಿದ್ದಾರೆ ಒಮ್ಮೆ ನೀವು ಹೋಗಿ ನೋಡಿಕೊಂಡು ಬನ್ನಿ. ಯಾವುದೇ ಒತ್ತಾಯವಿಲ್ಲ ನೀವು ನೋಡಿಕೊಂಡು ಬನ್ನಿ ಇಷ್ಟ ಆದ್ರೆ ಹೇಳಿ ಅಂದ ಕಿಚ್ಚ ಹೇಳಿದ್ದಾರೆ. ಈ ಘಟನೆಯನ್ನು ಕಾರ್ತಿಕ್ ಖಾಸಗಿ ಟಿವಿಯಲ್ಲಿ ರಿವೀಲ್ ಮಾಡಿದ್ದಾರೆ. 

ಬಾಬಾ ವಂಗಾ ನುಡಿದ 2023ರ ಭವಿಷ್ಯ ನಿಜವಾಯ್ತು | ಭಯಾನಕವಾಗಿದೆ 2024ರ ಭವಿಷ್ಯ

ಇದೆ ರೀತಿಯ ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ


Comments