ವಿಡಿಯೋ : ನಟ ವಿಜಯಕಾಂತ್ ದರ್ಶನಕ್ಕೆ ಬಂದಿದ್ದ ವಿಜಯ್ ಮೇಲೆ ಚಪ್ಪಲಿ ಎಸೆತ

 ವಿಡಿಯೋ : ನಟ ವಿಜಯಕಾಂತ್ ದರ್ಶನಕ್ಕೆ ಬಂದಿದ್ದ ವಿಜಯ್ ಮೇಲೆ ಚಪ್ಪಲಿ ಎಸೆತ


ನಿನ್ನೆಯಷ್ಟೇ ನಿಧನರಾಗಿದ್ದ ನಟ, ರಾಜಕಾರಣಿ ವಿಜಯಕಾಂತ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಅಂತಿಮ ದರ್ಶನ ಪಡೆದ ಬಳಿಕ ತಮ್ಮ ಕಾರಿನತ್ತ ಹೊರಟಿದ್ದ ವಿಜಯ್ ಮೇಲೆ ಚಪ್ಪಲಿ ತೂರಿ ಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೆಚ್ಚಿನ ನಟನ ಅಂತಿಮ ದರ್ಶನ ಪಡೆಯುವುದಕ್ಕಾಗಿ ಜನಸಾಗರವೇ ಹರಿದು ಬಂದಿತ್ತು. ಜನರ ನಡುವೆ ಸಾಗಿ, ತಮ್ಮ ಕಾರಿನತ್ತ ಹೊರಟಿದ್ದರು ವಿಜಯ್. ಕಾರಿನತ್ತ ಹೊರಡಲು ವಿಜಯ್ ಹರಸಾಹಸ ಪಡುತ್ತಿದ್ದರು. ಈ ಸಮಯದಲ್ಲೇ ಯಾರೋ ಚಪ್ಪಲಿ ಎಸೆದಿದ್ದಾರೆ. ಆದರೆ, ಅವರಿಗೆ ಅದು ಬಿದ್ದಿಲ್ಲ.

ವಿಡಿಯೋ ನೋಡಿ: 

ರಾಜಕಾರಣಿ ವಿಜಯಕಾಂತ್ ಅವರದ್ದು ಸಹಜವಾವಲ್ಲ, ಅದೊಂದು ಕೊಲೆ ಎಂದು ಮಲಯಾಳಂನ ಖ್ಯಾತ ಸಿನಿಮಾ ನಿರ್ದೇಶಕ ಅಲ್ಪೋನ್ಸ್ ಪುತ್ರೆನ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಂತೆ ಅವರು ಇನ್ಸ್ಟಾದ ಸ್ಟೋರಿ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ತನ್ನ ಆತಂಕವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಲ್ಪೋನ್, ರಾಜಕಾರಣಿ ಉದಯನಿಧಿ ಸ್ಟಾಲಿನ್ ಅವರಿಗೆ ತನಿಖೆ ನಡೆಸುವಂತೆ ಮನವಿ ಕೂಡ ಮಾಡಿಕೊಂಡಿದ್ದಾರೆ. ಜೊತೆಗೆ ಜಯಲಲಿತಾ ಕೊಂದವರು ಯಾರೆಂದು ತಾವು ಕೇಳಿರುವುದಾಗಿಯೂ ತಿಳಿಸಿದ್ದಾರೆ.

ಕ್ಯಾಪ್ಟನ್ ವಿಜಯಕಾಂತ್ ಅವರ ಕೊಲೆ ಮಾಡಿದವರನ್ನು ಪತ್ತೆ ಮಾಡಬೇಕು. ನೀವು ಅದನ್ನು ನಿರ್ಲಕ್ಷ್ಯ ಮಾಡಿದರೆ, ನಿಮ್ಮ ಹಾಗೂ ಸ್ಟಾಲಿನ್ ಅವರನ್ನು ಟಾರ್ಗೆಟ್ ಮಾಡ್ತಾರೆ. ಈಗಾಗಲೇ ಇಂಡಿಯನ್ 2 ಸೆಟ್ ನಲ್ಲಿ ಸ್ಟಾಲಿನ್ ಹಾಗೂ ಕಮಲ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು ಎಂದು ಪುತ್ರೆನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ.










Comments