ಪವಿ ಪೂವಪ್ಪ ಮಾಡಿದ ಯಡವಟ್ಟಿಗೆ ಸುದೀಪ್‌ ಖಡಕ್‌ ಕ್ಲಾಸ್!

ಪವಿ ಪೂವಪ್ಪ ಮಾಡಿದ ಯಡವಟ್ಟಿಗೆ ಸುದೀಪ್‌ ಖಡಕ್‌ ಕ್ಲಾಸ್!

ಬಿಗ್ ಬಾಸ್ ಮನೆಯ ಆಟಕ್ಕೆ 50 ದಿನ ಕಳೆಯುತ್ತಿದ್ದಂತೆ ಅವಿನಾಶ್ ಶೆಟ್ಟಿ- ಪವಿ ಪೂವಪ್ಪ ಎಂಟ್ರಿಯಾಗಿದೆ. ಮೊದಲ ವಾರವೇ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡಿದ್ದಾರೆ. ಬಳೆ ವಿಚಾರ ಮಾತೆತ್ತಿದ ಪವಿ ಪೂವಪ್ಪಗೆ  ಸುದೀಪ್ ಕಡೆಯಿಂದ ಸ್ಪೆಷಲ್ ಕ್ಲಾಸ್ ಆಗಿದೆ. 


ಪವಿ ಪೂವಪ್ಪ- ಅವಿನಾಶ್ ಶೆಟ್ಟಿ ಅವರಿಗೆ ಹೊರಗಡೆಯ ಯಾವ ವಿಚಾರವನ್ನೂ ದೊಡ್ಮನೆಯಲ್ಲಿ ಚರ್ಚೆ ಮಾಡುವಂತಿಲ್ಲ ಎಂದು ಬಿಗ್ ಬಾಸ್ ಮೊದಲೇ ತಾಕೀತು ಮಾಡಿದ್ದರು. ಆದರೆ ಪವಿ ಅವರು ಬಾಯಿ ತಪ್ಪಿ ಟ್ರೋಲ್ ಪೇಜ್‌ಗಳಲ್ಲಿ ವಿನಯ್ ಗೌಡ ಬಳೆ ವಿಚಾರ ಚರ್ಚೆ ಆಗಿದ್ದನ್ನು ವಿನಯ್ ಮುಂದೆ ಹೇಳಿದ್ದರು. ರೂಲ್ಸ್ ಮರೆತು ಮನೆಯ ಹೊರಗಿನ ವಿಚಾರವನ್ನ ಪವಿ ರಿವೀಲ್ ಮಾಡಿದ್ದರು. ಈ ವಿಷಯ ತಿಳಿದ ಮೇಲೆ ವಿನಯ್, ನಾನು ಮಾಡಿದ ತಪ್ಪಿನಿಂದ ನನ್ನ ಹೆಂಡತಿ- ಮಗ ಅನುಭವಿಸುವ ಹಾಗಾಯ್ತು ಎಂದು ಬಾತ್‌ರೂಮ್‌ನಲ್ಲಿ ಕಣ್ಣೀರು ಹಾಕಿದರು. ಆನಂತರ ಏನೂ ಆಗಿಲ್ಲ ಎಂದು ಬಿಗ್ ಬಾಸ್ ವಿನಯ್‌ರನ್ನು ಸಂತೈಸಿದರು. ಹೊರಗೆ ಎಲ್ಲವೂ ಕ್ಷೇಮವಾಗಿದೆ ಎಂದು ಭರವಸೆ ನೀಡಿದ್ದರು.

ಬಿಗ್ ಬಾಸ್ ಶೋ ಶುರುವಾಗಿ 50 ದಿನ ಆಗಿದೆ. ಎಲ್ಲರೂ ಬಳೆ ವಿಚಾರವನ್ನು ಮರೆತಿದ್ದಾರೆ. 50 ದಿನಗಳನ್ನು ಕಳೆದ ಸ್ಪರ್ಧಿಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು. ನನ್ನ ಸ್ಪರ್ಧಿಯ ಬಗ್ಗೆ ನೀವು ಹೇಗೆ ಮಾತನಾಡಿದ್ರಿ ಎಂದು ಕಿಚ್ಚ ಸುದೀಪ್ ಅವರು ಪವಿಗೆ ಕ್ಲಾಸ್ ತಗೊಂಡಿದ್ದಾರೆ. ವಿನಯ್ ಗೌಡ ಹೆಂಡತಿ, ಮಗ ಹೇಗಿದ್ದಾರೆ? ಅವರು ಎಲ್ಲಿದ್ದಾರೆ? ಅವರ ಮನೆಗೆ ಹೋಗಿ ಬಂದಿದ್ದೀರಾ? ಏನೂ ನಿಮಗೆ ಗೊತ್ತಿಲ್ಲ. ಏನೂ ವಿಷಯ ಗೊತ್ತಿಲ್ಲದೆ ನೀವು ವಿನಯ್ ಬಳಿ ಹೋಗಿ ಟ್ರೋಲ್ ಪೇಜ್‌ಗಳಲ್ಲಿ ಬಳೆ ಬಗ್ಗೆ ಏನೋ ಬಂತು ಎಂದು ಹೇಳಿದ್ದೀರಿ. ಯಾವ ಎಪಿಸೋಡ್ ನೋಡದೆ ಒಂದು ವಿಷಯದ ಬಗ್ಗೆ ಹೇಗೆ ಕಾಮೆಂಟ್ ಪಾಸ್ ಮಾಡ್ತೀರಿ? ಒಂದು ಪಾಸಿಂಗ್ ಕಾಮೆಂಟ್‌ನಿಂದ ಒಬ್ಬ ವ್ಯಕ್ತಿಯ ಮನಸ್ಥಿತಿ ಬದಲಾಗತ್ತೆ. 100 ಕಿಮೀ ವೇಗದಲ್ಲಿ ಹೋಗುವ ಸ್ಪರ್ಧಿಗೆ ಅರ್ಧ ದಾರಿಗೆ ಎಂಡ್ ಬೋರ್ಡ್ ಹಾಕಿದರೆ ಏನಾಗುವುದು? ಎಂದು ಸುದೀಪ್ ಹೇಳಿದ್ದಾರೆ.

ನನಗೋಸ್ಕರ ಟ್ರೋಲ್ ಪೇಜ್ ಆರಂಭ ಮಾಡಿಸಿ ನಾನು ಬೆಳಗ್ಗೆ ಗುಡ್ ಮಾರ್ನಿಂಗ್ ಅಂತ ಹೇಳಿದರೂ ಕೂಡ, ಸುದೀಪ್ ಗುಡ್ ಮಾರ್ನಿಂಗ್ ಅಂತ ಹೇಳ್ತಾನೆ ಅಂತ ಬೈತಾರೆ. ನನ್ನಿಂದ ಅವರು ಊಟ ಮಾಡುತ್ತಿದ್ದಾರೆ. ಅವರ ಟ್ರೋಲ್ ಪೇಜ್‌ಗಳನ್ನು ನೋಡಿ ನಾನು ಎಂಜಾಯ್ ಮಾಡ್ತೀನಿ. ನಾನು ಯಾವುದೋ ಕಿತ್ತೋದ ಕೆಲಸ ಮಾಡಿಲ್ಲ ಎಂದು ಸುದೀಪ್ ಹೇಳಿದ್ದಾರೆ.

ನೀವು ಕೊನೆಯದಾಗಿ ಇಲ್ಲಿಗೆ ಬಂದು ಟ್ರೋಫಿ ಪಡೆಯುವ ಬಗ್ಗೆ ಯೋಚನೆ ಮಾಡಿ, ಅದನ್ನು ಬಿಟ್ಟು ಬೇರೆ ಏನೂ ತಲೆಕೆಡಿಸಿಕೊಳ್ಳಬೇಡಿ. ನೀವು ಯಾವ ಘಟನೆ ನಡೆಯಿತು ಅಂತ ಅಂದುಕೊಂಡಿದ್ದೀರೋ ಅದೆಲ್ಲ ಮುಗಿದು ಜನರು ಮರೆತಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ. ಕಳೆದ 10 ಸೀಸನ್‌ಗಳಲ್ಲಿ ಯಾವ ವೈಲ್ಡ್ ಕಾರ್ಡ್ ಎಂಟ್ರಿಗೂ ನಾನು ಈ ರೀತಿಯ ಸ್ವಾಗತ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ಕಾಮೆಂಟ್‌ಗಳು