ನಾನು ಭಾರತೀಯ ಮುಸ್ಲಿಂ: ಸಿಡಿದೆದ್ದ ಮೊಹಮ್ಮದ್ ಶಮಿ
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಮೊಹಮ್ಮದ್ ಶಮಿ ಅವರ ಪ್ರದರ್ಶನವನ್ನು ಕ್ರಿಕೆಟ್ ಪಂಡಿತರು ಶ್ಲಾಘಿಸಿದರು. ಆದರೆ ಪಾಕಿಸ್ತಾನದಿಂದ ಮಾತ್ರ ಶಮಿ ಬಗ್ಗೆ ದ್ವೇಷಪೂರಿತ ಹೇಳಿಕೆಗಳು ಕೇಳಿಬಂದವು. ಅಂತಹ ಒಂದು ಸುಳ್ಳು ಸುದ್ದಿಗೆ ಇದೀಗ ಶಮಿ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕಳೆದ ಎರಡು ತಿಂಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ 2023ರ ಮೊದಲ 4 ಪಂದ್ಯಗಳಿಂದ ಹೊರಗುಳಿದ ನಂತರ, ತಂಡಕ್ಕೆ ಮರಳಿ ಬಂದ ಶಮಿ ಅದ್ಭುತ ಪ್ರದರ್ಶನ ನೀಡಿವ ಮೂಲಕ ತಂಡವನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.
ಕಳೆದ ಒಂದು ತಿಂಗಳಿಂದ ಈ ವಿಚಾರದ ಬಗ್ಗೆ ತುಂಬಾ ಚರ್ಚೆಗಳು ಕೇಳಿಬರುತ್ತಿದ್ದವು, ಈ ಬಗ್ಗೆ ಮಾತನಾಡಿದ ಶಮಿ, ನಾನು ಭಾರತೀಯ ಮುಸ್ಲಿಂ ಎಂದು ಹೆಮ್ಮೆಪಡುತ್ತೇನೆ. ಭಾರತದ ಯಾವುದೇ ವೇದಿಕೆಗೆ ಯಾವಾಗ ಬೇಕಾದರೂ ತಲೆಬಾಗಬಹುದು ಮತ್ತು ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನಿಗಳು ತೊಂದರೆ ಕೊಡುವುದರ ಬಗ್ಗೆ ಮಾತ್ರ ಯೋಚಿಸುತ್ತಾರೆ ಮತ್ತು ಗಾಸಿಪ್ ಮಾಡಲು ಇಷ್ಟಪಡುತ್ತಾರೆ ಎಂದು ಹೇಳುವ ಮೂಲಕ ಸುಳ್ಳು ಸುದ್ದಿ ಹರಿ ಬಿಡುತ್ತಿದ್ದ ಪಾಕಿಸ್ತಾನಿಗಳ ಬಾಯಿ ಮುಚ್ಚಿಸಿದ್ದಾರೆ. ಶಮಿ ಹೇಳಿಕೆ ಈಗ ಸಖತ್ ವೈರಲ್ ಆಗುತ್ತಿದೆ.
Comments
Post a Comment