ಡಿ ಬಾಸ್ ಕಾಟೇರನ ಖದರ್ ಗೆ ಬಾಕ್ಸ್ ಆಫೀಸ್ ಉಡೀಸ್
2023 ರ ಅಂತ್ಯಕ್ಕೆ ರಿಲೀಸ್ ಆಗಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲ ಕಾಡಿತ್ತು. ನಿನ್ನೆ ಆ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾ ಪ್ರಿಯರಿಗೆ ಮತ್ತೊಂದು ಅದ್ಭುತ ಮೂವಿ ಕೊಟ್ಟಿದ್ದಾರೆ.
ಅಂದಹಾಗೆ 'ಕಾಟೇರ' ಸಿನಿಮಾ ಬಿಡುಗಡೆಯಾದ ಮೊದಲ ದಿನ ಎಷ್ಟುಗಳಿಸಿದೆ ಎನ್ನುವ ಬಗ್ಗೆ ಇನ್ನೂ ಅಧಿಕೃತವಾಗಿ ಸಿನಿಮಾ ತಂಡ ಮಾಹಿತಿ ನೀಡಿದ್ದು ಕಾಟೇರ ಕಲೆಕ್ಷನ್ ಕಮಾಲ್ 19 ಕೋಟಿ 79 ಲಕ್ಷ ಗಳಿಕೆ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಮುನ್ನಡೆಯುತ್ತಿರುವ ರಾಜ್ಯಾದ್ಯಂತ ಅಭೂತಪೂರ್ವ ಓಪನಿಂಗ್ ಪಡೆದುಕೊಂಡು ರಾರಾಜಿಸುತ್ತಿದೆ. ಹೀಗಾಗಿ ಈ ಸಿನಿಮಾ ಮತ್ತಷ್ಟು ದಾಖಲೆ ಧೂಳ್ ಮಾಡುವ, ಹೊಸ ಇತಿಹಾಸ ಸೃಷ್ಟಿಸುವ ನಿರೀಕ್ಷೆ ಇದೆ.
2023 ದರ್ಶನ್ ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದ್ದು ಇದೇ ವರ್ಷವೇ ಎರಡೆರಡು ಸಿನಿಮಾಗಳು ರಿಲೀಸ್ ಆಗಿವೆ. ಕೆಲ ತಿಂಗಳ ಹಿಂದಷ್ಟೇ ಕ್ರಾಂತಿ ಸಿನಿಮಾ ರಿಲೀಸ್ ಆಗಿ, ದಾಖಲೆ ಧೂಳ್ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಕಾಟೇರ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದ್ದು. ಸಿನಿಮಾ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಎಲ್ಲೆಲ್ಲೂ ಸಂಭ್ರಮಿಸಿದ್ದಾರೆ. ಇಂದು ಶನಿವಾರ & ನಾಳೆ ಭಾನುವಾರ ಇರುವ ಕಾರಣ ಬಾಕ್ಸ್ ಆಫಿಸ್ ಧೂಳ್ ಆಗೋದು ಗ್ಯಾರಂಟಿ ಅಂತಿದ್ದಾರೆ ನಟ ದರ್ಶನ್ ಅಭಿಮಾನಿಗಳು. ಜೊತೆಗೆ ಸೋಮವಾರ ಹೊಸವರ್ಷ ಬಂದಿರುವ ಹಿನ್ನೆಲೆ ಇದೀಗ ಮತ್ತಷ್ಟು ಸಂಭ್ರಮ ಹೆಚ್ಚಾಗಿದೆ.
ಒಟ್ನಲ್ಲಿ ಕನ್ನಡ ಸಿನಿಮಾಗಳು ಅಬ್ಬರಿಸುತ್ತಿವೆ ಅದರಲ್ಲೂ ಕ್ರಾಂತಿ ಬಳಿಕ ಮತ್ತೊಮ್ಮೆ ಹೀಗೆ ಬಹುದೊಡ್ಡ ಮಟ್ಟದಲ್ಲಿ ನಟ ದರ್ಶನ್ ಅವರ ಸಿನಿಮಾ ಅಬ್ಬರಿಸಿದೆ. ಈ ಮೂಲಕ ಫ್ಯಾನ್ಸ್ ಪಾಲಿನ ಪ್ರೀತಿಯ 'ಡಿ-ಬಾಸ್' ದರ್ಶನ್ ಅವರು 2023ಕ್ಕೆ ಸಂಭ್ರಮದಿಂದ ಗುಡ್‌ಬೈ ಹೇಳ್ತಾ ಇದ್ದಾರೆ. ಹಾಗೆ ದೊಡ್ಡ ಹಿಟ್ ಮೂಲಕ 2024ರ ಹೊಸ ವರ್ಷ ಬರಮಾಡಿಕೊಳ್ಳುತ್ತಿದ್ದಾರೆ.
Comments
Post a Comment