CBSE Board Exam 2024: 10 ಮತ್ತು 12ನೇ ತರಗತಿಯ ವೇಳಾಪಟ್ಟಿ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2023-2024 ರ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಎರಡು ತರಗತಿಗಳ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 (2024)ರಿಂದ ಪ್ರಾರಂಭವಾಗಲಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಇದನ್ನು ಗಮನಿಸಬೇಕಾಗಿದೆ.
10ನೇ ತರಗತಿಯ ವೇಳಾಪಟ್ಟಿ
* ಫೆಬ್ರವರಿ 19 - ಸಂಸ್ಕೃತ
* ಫೆಬ್ರವರಿ 20 - ತಮಿಳು
* ಫೆಬ್ರವರಿ 21 - ಹಿಂದಿ
* ಫೆಬ್ರವರಿ 24 - ಕನ್ನಡ
* ಫೆಬ್ರವರಿ 26 - ಇಂಗ್ಲೀಷ್
* ಮಾರ್ಚ್ 2 -ವಿಜ್ಞಾನ
* ಮಾರ್ಚ್ 7 - ಸಮಾಜ ವಿಜ್ಞಾನ
* ಮಾರ್ಚ್ 11 - ಗಣಿತ
12ನೇ ತರಗತಿಯ ವೇಳಾಪಟ್ಟಿ
* ಫೆಬ್ರವರಿ 19 - ಹಿಂದಿ
* ಫೆಬ್ರವರಿ 19 - ಇಂಗ್ಲೀಷ್
* ಫೆಬ್ರವರಿ 27 - ರಸಾಯನಶಾಸ್ತ್ರ
* ಫೆಬ್ರವರಿ 29 - ಭೂಗೋಳಶಾಸ್ತ್ರ
* ಮಾರ್ಚ್ 14 -ಕನ್ನಡ, ತಮಿಳು, ತೆಲುಗು
* ಮಾರ್ಚ್ 19 - ಜೀವಶಾಸ್ತ್ರ
* ಮಾರ್ಚ್ 22 - ರಾಜ್ಯಶಾಸ್ತ್ರ
* ಮಾರ್ಚ್ 23 - ಅಕೌಂಟೆನ್ಸಿ
* ಮಾರ್ಚ್ 27 - ವ್ಯಾಪಾರ ಅಧ್ಯಯನ
* ಮಾರ್ಚ್ 28 - ಇತಿಹಾಸ
* ಏಪ್ರಿಲ್ 1 - ಸಮಾಜಶಾಸ್ತ್ರ
Comments
Post a Comment