ಎಲ್ಲೆಲ್ಲಿ ಮಿಡ್‌ನೈಟ್ ಶೋ, 'ಕಾಟೇರ' ಅಡ್ವಾನ್ಸ್ ಬುಕ್ಕಿಂಗ್‌ಗೆ ಹೇಗಿದೆ ರೆಸ್ಪಾನ್ಸ್ ಗೊತ್ತಾ ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಸ್ಯಾಂಪಲ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಸದ್ಯ ಬೆಂಗಳೂರಿನಲ್ಲೇ 15 ಥಿಯೇಟರ್‌ಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ರಾತ್ರಿ 12 ಗಂಟೆಗೆ, ಬೆಳಗಿನ ಜಾವ 3 ಗಂಟೆ, 5 ಗಂಟೆ, 6 ಗಂಟೆಗೆ ಬೆಂಗಳೂರಿನ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಜಾಲಹಳ್ಳಿ ಕ್ರಾಸ್‌ನಲ್ಲಿರುವ ರಾಕ್‌ಲೈನ್ ಮಾನ್, ತಾವರೆಕೆರೆ ಲಕ್ಷ್ಮೀ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಲಿದೆ.
ರಾಕ್‌ಲೈನ್ ಮಾಲ್‌ನಲ್ಲಿ ಮಿಡ್‌ನೈಟ್ ಶೋ ಟಿಕೆಟ್ ದರ 1000 ರೂ.ಗೆ ಏರಿಸಲಾಗಿದೆ. ಲಕ್ಷ್ಮೀ ಥಿಯೇಟರ್‌ನಲ್ಲಿ 500 ರೂ. ಇದೆ. ಇನ್ನು ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ ಬೆಳಗ್ಗೆ 5 ಗಂಟೆ ಹಾಗೂ 9.30 ಶೋಗಳು ಸೋಲ್ಡ್‌ಔಟ್ ಆಗಿದೆ. ಅನುಪಮಾ ಚಿತ್ರಮಂದಿರದಲ್ಲಿ 6 ಗಂಟೆ ಹಾಗೂ 10.30 ಶೋಗಳು ಸೋಲ್ಡ್‌ಔಟ್ ಆಗಿರುವುದು ವಿಶೇಷ. ಫ್ಯಾನ್ಸ್ ಶೋಗಳಿಗೆ ಟಿಕೆಟ್ ದರ ಹೆಚ್ಚಿಸಿದ್ದರೂ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಲು ಕಾಯ್ತಿದ್ದಾರೆ. ಹಲವು ಶೋಗಳು ಫಾಸ್ಟ್‌ಫಿಲ್ಲಂಗ್ ಆಗುತ್ತಿದೆ.
ಮತ್ತಷ್ಟು ಥಿಯೇಟರ್‌ಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಬೇಕಿದೆ. ಪ್ರೇಕ್ಷಕರು ತಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು, ಟಿಕೆಟ್ ಬುಕ್ ಮಾಡಲು ಕಾಯುತ್ತಿದ್ದಾರೆ. 24 ಗಂಟೆಗಳಲ್ಲಿ 'ಕಾಟೇರ' ಚಿತ್ರದ 9 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿರುವುದಾಗಿ ಬುಕ್‌ಮೈ ಶೋನಲ್ಲಿ ಗೊತ್ತಾಗುತ್ತಿದೆ. ದರ್ಶನ್ ಕ್ರೇಜ್‌ಗೆ ತಕ್ಕಂತೆ ಆರಂಭದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿರುವುದು ಗೊತ್ತಾಗುತ್ತಿದೆ.
ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಥಿಯೇಟರ್ ಮುಂದೆ 90 ಅಡಿ ಕಟೌಟ್ ಎದ್ದು ನಿಂತಿದೆ. 'ಡಂಕಿ' ಹಾಗೂ 'ಸಲಾರ್' ಸಿನಿಮಾಗಳು ಈ ವಾರ ರಿಲೀಸ್ ಆಗಿ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿವೆ. ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಹಾಗಾಗಿ 'ಕಾಟೇರ' ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
ಮಂಡ್ಯದಲ್ಲಿ ನಡೆದ 'ಕಾಟೇರ' ಪ್ರೀರಿಲೀಸ್ ಈವೆಂಟ್ ಅದ್ಧೂರಿಯಾಗಿ ನೆರವೇರಿದೆ. ಸಂಸದೆ ಸುಮಲತಾ ಅಂಬರೀಶ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಭಿಷೇಕ್ ಅಂಬರೀಶ್ ವೇದಿಕೆ ಏರಿ ಹೆಜ್ಜೆ ಹಾಕಿದ್ದರು. ನಟ ದರ್ಶನ್ ಕೂಡ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ವೇದಿಕೆಯಲ್ಲಿ ಬಿಡುಗಡೆಯಾದ ಥೀಮ್ ಸಾಂಗ್ ವೈರಲ್ ಆಗುತ್ತಿದೆ. ರೈತರ ದಿನದ ವಿಶೇಷವಾಗಿ ರೈತರ ಕುರಿತ ಹಾಡು ಹೊರಹೊಮ್ಮಿದೆ.
Comments
Post a Comment