'ಕಾಟೇರ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಈ ಸನ್ನಿವೇಶಕ್ಕೆ ಬಿತ್ತು ಕತ್ತರಿ

 'ಕಾಟೇರ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಈ ಸನ್ನಿವೇಶಕ್ಕೆ ಬಿತ್ತು ಕತ್ತರಿ

ತರುಣ್ ಸುಧೀರ್ ನಿರ್ದೇಶನದ ಹಳ್ಳಿ ಸೊಗಡಿನ ಸಿನಿಮಾ 'ಕಾಟೇರ'. ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಹೊರ ಅವತಾರದಲ್ಲಿ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ 'ಕಾಟೇರ' ಸಿನಿಮಾ ಕಟ್ಟಿಕೊಡಲಾಗಿದೆ. 70ರ ದಶಕದ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ದರ್ಶನ್ ಕುಲುವೆಯಲ್ಲಿ ಮಚ್ಚುಗಳನ್ನು ತಟ್ಟುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳು ಕೇಳುವ ಮಾಸ್ ಅಂಶಗಳ ಜೊತೆಗೆ ಒಂದೊಳ್ಳೆ ಕಥೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.


ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಒಂದಷ್ಟು ಬದಲಾವಣೆಗಳನ್ನು ಹೇಳಿದ್ದು ಅದಕ್ಕೆಲ್ಲಾ ಒಪ್ಪಿ ಚಿತ್ರತಂಡ ಯು/ಎ ಸರ್ಟಿಫಿಕೇಟ್ ಪಡೆದಿದೆ. ಇದೀಗ 'ಕಾಟೇರ' ಚಿತ್ರದ ಸೆನ್ಸಾರ್ ಕಾಪಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್‌ನಲ್ಲಿದ್ದ ಡೈಲಾಗ್‌ವೊಂದರ ಬಗ್ಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಡೈಲಾಗ್ ಅನ್ನು ಚಿತ್ರದಲ್ಲಿ ಬದಲಿಸಲಾಗಿದೆ.

ಇನ್ನು ಸನ್ನಿವೇಶವೊಂದರಲ್ಲಿ ವ್ಯಕ್ತಿಯ ತಲೆಯನ್ನು ಕಡಿಯುವ ದೃಶ್ಯದ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು ಚಿತ್ರತಂಡ ಅದನ್ನು ಬದಲಿಸಿದೆ. ಇನ್ನು ಕೈ ಕತ್ತರಿಸುವ ದೃಶ್ಯವನ್ನು ತೆಗೆಯಲಾಗಿದೆ. ಮತ್ತೊಂದು ದೃಶ್ಯದಲ್ಲಿ ಧಾರಾಕಾರವಾಗಿ ರಕ್ತ ಹರಿಯುವ ಸನ್ನಿವೇಶಕ್ಕೆ ಕತ್ತರಿ ಹಾಕಲಾಗಿದೆ.


ಒಂದು ಪದವನ್ನು ಕತ್ತರಿಸಲು ಸೂಚಿಸಿದ್ದು ಸೂಕ್ತ ಕಾರಣ ಕೊಟ್ಟು ಅದನ್ನು ಚಿತ್ರತಂಡ ಉಳಿಸಿಕೊಂಡಿದೆ. ಇನ್ನು ಧೂಮಪಾನ, ಪ್ರಾಣಿ ಬಲಿ ಸನ್ನಿವೇಶಕ್ಕೆ ಡಿಸ್‌ಕ್ಲಮೇರ್ ಹಾಕುವನ್ನು ಸೆನ್ಸಾರ್ ಮಂಡಳಿ ಸೂಚಿಸಿದೆ. ಅದಕ್ಕೆ ಚಿತ್ರತಂಡ ಒಪ್ಪಿಕೊಂಡಿದ್ದು ಚಿತ್ರಕ್ಕೆ ಯುಎ ಸರ್ಟಿಫಿಕೇಟ್ ಸಿಕ್ಕಿದೆ. ಇನ್ನು ಸೆನ್ಸಾರ್ ಕಾಪಿಯಲ್ಲಿ ಚಿತ್ರದ ರನ್‌ಟೈಮ್ ಕೂಡ ರಿವೀಲ್ ಆಗಿದೆ.

'ಕಾಟೇರ' ಚಿತ್ರದ ರನ್‌ಟೈಮ್ 183 ನಿಮಿಷಗಳು. ಅಂದ್ರೆ 3 ಗಂಟೆ 3 ನಿಮಿಷ ಎನ್ನುವುದು ಗೊತ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಸಿನಿಮಾಗಳ ಕಾಲಾವಧಿ ದೀರ್ಘವಾಗುತ್ತಿದೆ. ಕೆಲವೊಮ್ಮೆ ಇದು ರಿಸ್ಕ್ ಎನಿಸಿದರೂ ಚಿತ್ರತಂಡ ಧೈರ್ಯ ಮಾಡಿ ಇಷ್ಟು ದೊಡ್ಡದಾಗಿ ಕಥೆ ಹೇಳುವ ಪ್ರಯತ್ನ ಮಾಡುತ್ತಿವೆ.

ಯಮಲೋಕ ಎಷ್ಟು ದೂರವಿದೆ | ಸತ್ತ ನಂತರ ಏನೆಲ್ಲಾ ಆಗುತ್ತದೆ | After Death

ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 'ಕಾಟೇರ' ಸಿನಿಮಾ ಒಂದು ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಬರೋಬ್ಬರಿ 75 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಬುಕ್ ಆಗಿದೆ. ಇನ್ನು ಹಲವೆಡೆ ಬುಕ್ಕಿಂಗ್ ಓಪನ್ ಆಗಬೇಕಿದೆ. ಮಧ್ಯರಾತ್ರಿ 12 ಗಂಟೆ, 3 ಗಂಟೆ, 5 ಗಂಟೆ, 6.30ಕ್ಕೆ ಕೆಲವೆಡೆ ಸಿನಿಂಆ ಪ್ರದರ್ಶನ ಶುರುವಾಗುತ್ತಿದೆ. ಹಲವು ಚಿತ್ರಮಂದಿರಗಳು ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ.


Comments