ಜೈಲಿನಲ್ಲಿದ್ದ ಕಾರ್ತಿಕ್​​ಗೆ ಸಿಕ್ತು ಕಿಚ್ಚನ ಚಪ್ಪಾಳೆ

ಜೈಲಿನಲ್ಲಿದ್ದ  ಕಾರ್ತಿಕ್​​ಗೆ ಸಿಕ್ತು ಕಿಚ್ಚನ ಚಪ್ಪಾಳೆ



ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ಸರಮಾಲೆ ದೊಡ್ಡದಾಗಿತ್ತು. 2 ತಂಡಗಳು ಚಾಟಿ ಬೀಸಿದ ಸುದೀಪ್​, ಮನೆ ಮಂದಿಯೆಲ್ಲಾ ಕಳಪೆ ಕೊಟ್ಟು ಜೈಲಿಗೆ ಕಳಿಸಿದ ಕಾರ್ತಿಕ್​ ಮಹೇಶ್​ಗೆ ಕಿಚ್ಚ ಚಾಪ್ಪಳೆ ನೀಡಿದ್ರು.
ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಕಾರ್ತಿಕ್ ಮಹೇಶ್​ ಭಾವುಕರಾಗಿ ಕಣ್ಣೀರು ಹಾಕಿದ್ರು. ಬಳಿಕ ಬಿಗ್ ಬಾಸ್ ಕಾರ್ತಿಕ್​ಗೆ ಜೈಲಿನಲ್ಲಿದ್ದ ಫೋಟೋವನ್ನು ಗಿಫ್ಟ್ ಆಗಿ ನೀಡಿದೆ.


ಮಾಡಿದ ತಪ್ಪನ್ನು ಒಪ್ಪಿಕೊಂಡ ಕಾರ್ತಿಕ್ ಮನಬಿಚ್ಚಿ ಮಾತಾಡಿ ಭಾವುಕರಾದ್ರು. ವಾರದ ಟಾಸ್ಕ್ ಪರಿಗಣಿಸಿ ಸುದೀಪ್​ ಕಿಚ್ಚನ ಚಪ್ಪಾಳೆಯನ್ನು ಕಾರ್ತಿಕ್​ಗೆ ನೀಡಿದ್ರು.
ಬಿಗ್ ಬಾಸ್​ ಮನೆಯಲ್ಲಿ ನಡೆದ ಈ ವಾರದ ಟಾಸ್ಕ್​ನಲ್ಲಿ ಕಾರ್ತಿಕ್ ಮಹೇಶ್​ ಉತ್ತಮ ಪ್ರದರ್ಶನ ನೀಡಿದ್ರು. ಆದ್ರೆ ವರ್ತೂರ್ ಸಂತೋಷ್​ ಅಂಡ್​ ಟೀಮ್​ ಹಾಗೂ ಬಹುತೇಕರು ಕಾರ್ತಿಕ್​ಗೆ ಕಳಪೆ ನೀಡಿ ಜೈಲಿಗೆ ಕಳುಹಿಸಿದ್ರು.

ಕಾರ್ತಿಕ್ ಆಟ ಗಮನಿಸಿದ ಸುದೀಪ್ ಈ ವಾರ ಕಿಚ್ಚನ ಚಪ್ಪಾಳೆಯನ್ನು ಕಾರ್ತಿಕ್ ಮಹೇಶ್​ಗೆ ನೀಡಿದ್ರು. ಇದ್ರಿಂದ ಕಾರ್ತಿಕ್ ಕೂಡ ಫುಲ್ ಖುಷ್ ಆಗಿದ್ದಾರೆ.

ಸುದೀಪ್ ಮುಂದೆ ಮಾತಾಡಿದ ಕಾರ್ತಿಕ್​, ನನಗೆ ವಿನಯ್​ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎನ್ನುವ ಉದ್ದೇಶ ಇರಲಿಲ್ಲ. ನೆಲಕ್ಕೆ ಬಿಸಾಡಿದೆ. ಕೋಪದಲ್ಲಿ ಮಾತಾಡಿದ ಎಂದು ಕಣ್ಣೀರು ಹಾಕಿದ್ರು. ನಾನು ಆಡದ ಮಾತನ್ನು ಆಡಿದೆ ಎಂದು ನಮ್ರತಾ ಹೇಳಿದ್ದು ನೋವಾಯ್ತು ಎಂದು ಕಾರ್ತಿಕ್ ಹೇಳಿದ್ರು.
ಕೆಲವರು ಹಳೆಯ ವಿಚಾರವನ್ನೇ ತೆಗೆದುಕೊಂಡು ಸೇಡು ತೀರಿಸಿಕೊಳ್ಳಲು ಹೊರಟಿದ್ದು ನಿಮ್ಮ ಬುದ್ದಿ ತೋರಿಸುತ್ತದೆ. ಕ್ರಿಯೇಟಿವ್ ಆಗಬೇಕಿದ್ದ ಗೇಮ್ ಏನೆಲ್ಲಾ ಆಯ್ತು ಎಂದು ಸುದೀಪ್​ ಮನೆ ಮಂದಿಯನ್ನು ತರಾಟೆಗೆ ತೆಗೆದುಕೊಂಡ್ರು.
ಕಾರ್ತಿಕ್ ನೀವು ಚಪ್ಪಲಿಯನ್ನು ಬಳಸಿದ್ದು ದೊಡ್ಡ ತಪ್ಪು ಎಂದು ಸುದೀಪ್ ಹೇಳಿದ್ರು. ಬೇರೆ ಯಾವ ವಸ್ತು ಕೂಡ ನಿಮಗೆ ಸಿಗಲಿಲ್ವಾ ಎಂದು ಕೇಳಿದ್ರು.
ಕಾರ್ತಿಕ್ ಕೂಡ ನಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡ್ರು. ಕೋಪದಲ್ಲಿ ಏನು ಮಾಡಬೇಕೆಂದು ಗೊತ್ತಾಗಲಿಲ್ಲ ಎಂದು ಕಾರ್ತಿಕ್ ಹೇಳಿದ್ರು.

ಕಾಮೆಂಟ್‌ಗಳು