ಬಿಗ್ ಬಾಸ್ ಮನೆಯಲ್ಲಿ ‘ಅತಿ ಹೆಚ್ಚು ನೆಗೆಟಿವ್ ಆಗಿರೋದು ಪ್ರತಾಪ್’

 ಬಿಗ್ ಬಾಸ್ ಮನೆಯಲ್ಲಿ ‘ಅತಿ ಹೆಚ್ಚು ನೆಗೆಟಿವ್ ಆಗಿರೋದು ಪ್ರತಾಪ್’



ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ನೆಗೆಟಿವ್ ವಿಚಾರ ಹರಡುವವರು ಯಾರು ಎನ್ನುವ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಅನೇಕರು ಪ್ರತಾಪ್ ಹೆಸರು ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅವರು ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದಾರೆ. ದೊಡ್ಮನೆಯಲ್ಲಿ ಅವರ ಕಾಲೆಳೆಯಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಮನೆಯಿಂದ ಹೊರ ಹಾಕಬೇಕು ಎಂದು ಅನೇಕರು ನಿರ್ಧರಿಸಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ನೆಗೆಟಿವ್ ವಿಚಾರ ಹರಡುವವರು ಯಾರು ಎನ್ನುವ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಅನೇಕರು ಪ್ರತಾಪ್ ಹೆಸರು ತೆಗೆದುಕೊಂಡಿದ್ದಾರೆ. ಪ್ರತಾಪ್ ಜೊತೆ ಆಪ್ತವಾಗಿದ್ದ ವರ್ತೂರು ಸಂತೋಷ್ ಅವರು ಕೂಡ ತಿರುಗಿ ಬಿದ್ದಿದ್ದಾರೆ. ಇದನ್ನು ಪ್ರತಾಪ್ ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.

Comments