ವರ್ತೂರು ಸಂತೋಷ್​ ಮತ್ತು ತನಿಷಾ ಕುಪ್ಪಂಡ ಫ್ರೆಂಡ್ಶಿಫ್ ಕಟ್? ಏನಾಯ್ತು!

ವರ್ತೂರು ಸಂತೋಷ್​ ಮತ್ತು ತನಿಷಾ ಕುಪ್ಪಂಡ ಫ್ರೆಂಡ್ಶಿಫ್ ಕಟ್? ಏನಾಯ್ತು!

ಇಷ್ಟು ದಿನಗಳ ಕಾಲ ವರ್ತೂರು ಸಂತೋಷ್​ ಮತ್ತು ತನಿಷಾ ಕುಪ್ಪಂಡ ಅವರ ನಡುವೆ ಆಪ್ತತೆ ಇತ್ತು . ಆದರೆ ಈಗ ಅವರಿಬ್ಬರ ನಡುವೆ ಬಿರುಕು ಮೂಡಿದೆ. ತನಿಷಾಗೆ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರುರವರು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ ಅವರ ಆಟದ ವೈಖರಿ ಈಗ ಬದಲಾಗಿದೆ. ಆರಂಭದಲ್ಲಿ ಸುಮ್ಮನೆ ಇರುತ್ತಿದ್ದ ಅವರು ಈಗ ಸಖತ್​ ಜೋರಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ‘ಕಲರ್ಸ್ ಕನ್ನಡ’ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಡಿಸೆಂಬರ್​ 4ರ ಸಂಚಿಕೆಯಲ್ಲಿ ವರ್ತೂರು ಸಂತೋಷ್​ ಅವರು ಸಿಕ್ಕಾಪಟ್ಟೆ ನೇರವಾಗಿ ಮಾತನಾಡುತ್ತಾರೆ. ನಾಮಿನೇಷನ್​ ವಿಚಾರ ಬಂದಾಗ ತನಿಷಾ ಕುಪ್ಪಂಡ ಅವರಿಗೂ ವರ್ತೂರು ಸಂತೋಷ್​ ಮುಲಾಜು ತೋರಿಸಿಲ್ಲ. ಅವರ ಈ ವರ್ತನೆ ನೋಡಿ ತನಿಷಾಗೆ ಶಾಕ್​ ಆಗಿದೆ. ಅಷ್ಟೇ ಅಲ್ಲ, ಬಿಗ್​ ಬಾಸ್​ ಮನೆಯಲ್ಲಿ ಇರುವ ಇತರೆ ಸ್ಪರ್ಧಿಗಳೂ ಅಚ್ಚರಿಯಾಗಿದೆ . ಅಷ್ಟಕ್ಕೂ ವರ್ತೂರು ಸಂತೋಷ್​ ಹೇಳಿದ್ದೇನು? ಇಲ್ಲಿದೆ ವಿವರ..

ಸೋಮವಾರ ಬಂತೆಂದರೆ ನಾಮಿಷನ್​ ಪ್ರಕ್ರಿಯೆ ಶುರುವಾಗುತ್ತದೆ. ಯಾರು ಎಲಿಮಿನೇಟ್​ ಆಗಬೇಕು ಎಂಬುದಕ್ಕೆ ಸ್ಪರ್ಧಿಗಳ ಹೆಸರನ್ನು ನಾಮಿನೇಟ್​ ಮಾಡುವ ಸಂದರ್ಭ ಬಂದಾಗ ಎಲ್ಲರೂ ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ. 9ನೇ ವಾರದಲ್ಲೂ ಹಾಗೆಯೇ ಆಗಿದೆ. ವರ್ತೂರು ಸಂತೋಷ್​ ಅವರು ತನಿಷಾ ಕುಪ್ಪಂಡ ವಿರುದ್ಧವೇ ತಿರುಗಿ ಬಿದ್ದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ . 8ನೇ ವಾರದಲ್ಲಿ ತನಿಷಾಗೆ ಪೆಟ್ಟಾಗಿತ್ತು. ಆದರೂ ಕೂಡ ನಾಮಿನೇಷನ್​ ವಿಚಾರದಲ್ಲಿ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್​ ಅವರು ಹೇಳಿದ್ದಾರೆ.

‘ತನಿಷಾಗೆ ಇನ್ನೂ ಕಾಲು ನೋವು ಇದೆ. ಹಾಗಾಗಿ ಅವಳನ್ನೇ ಸೇವ್​ ಮಾಡಿ’ ಎಂದು ಕಾರ್ತಿಕ್ ಮಹೇಶ್​ ಅವರು ಕ್ಯಾಪ್ಟನ್​ ಆದ ಸ್ನೇಹಿತ್​ ಬಳಿ ಕೇಳಿಕೊಂಡರು. ಅದಕ್ಕೆ ವರ್ತೂರು ಸಂತೋಷ್​ ಒಪ್ಪಿಕೊಳ್ಳಲಿಲ್ಲ. ‘ತ್ಯಾಗಮೂರ್ತಿಗಳಾಗಲು ನಾವು ಇಲ್ಲಿಗೆ ಬಂದಿಲ್ಲ. ತನಿಷಾ ಅವರನ್ನು ನಾನು ಬೇಕಂತಲೇ ಹೋಗಿ ತಳ್ಳಿಲ್ಲ. ಅದಕ್ಕಾಗಿ ತನಿಷಾಗೆ ಇನ್ನೊಂದು ಚಾನ್ಸ್​ ಸಿಗಲಿ ಅಂತ ನಾನು ಕೇಳಲ್ಲ. ನಾವು ಮಾನವೀಯತೆ ಅಂತ ಹೋದರೆ ನಮ್ಮ ಹಿಂದೆ ಅಲ್ಲ.. ಮುಂದೆಯೇ ಹಳ್ಳ ತೋಡಿರುತ್ತಾರೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ.

ವರ್ತೂರು ಸಂತೋಷ್​ ಅವರ ಈ ಮಾತಿನಿಂದ ನಮ್ರತಾ ಗೌಡ ಅವರಿಗೆ ಸಖತ್​ ಖುಷಿಯಾಗಿದ್ದು, ಅವರು ಚಪ್ಪಾಳೆ ಹೊಡೆದು ಬೆಂಬಲ ಸೂಚಿಸಿದ್ದಾರೆ. ಆದರೆ ತನಿಷಾ ಕುಪ್ಪಂಡ ಅವರಿಗೆ ತೀವ್ರ ಅಸಮಾಧಾನ ಆಗಿದೆ. ಅದಕ್ಕೆ ಅವರು ಕೂಡಲೇ ತಿರುಗೇಟು ನೀಡಿದ್ದಾರೆ. ‘ಈಗ ಒಂದು ವಾರದಿಂದ ಮಾತನಾಡುತ್ತಿರುವ ವರ್ತೂರು ಸಂತೋಷ್​ ಅವರು ಮೊದಲ ದಿನದಿಂದಲೇ ಮಾತನಾಡಿದ್ದರೆ ನಾನು ಈ ಮಾತನ್ನು ಮೆಚ್ಚಿಕೊಳ್ಳುತ್ತಿದ್ದೆ’ ಎಂದು ತನಿಷಾ ಹೇಳಿದ್ದಾರೆ.  

ಕಾಮೆಂಟ್‌ಗಳು