ಬಿಗ್ ಸರ್​ಪ್ರೈಸ್: ಈ ಬಾರಿ 100 ದಿನಕ್ಕೆ ಮುಗಿಯಲ್ಲ ಬಿಗ್ ಬಾಸ್

 ಬಿಗ್ ಸರ್​ಪ್ರೈಸ್: ಈ ಬಾರಿ 100 ದಿನಕ್ಕೆ ಮುಗಿಯಲ್ಲ ಬಿಗ್ ಬಾಸ್



ಬಿಗ್ ಬಾಸ್ ಎಂದಾಗ ತಕ್ಷಣಕ್ಕೆ ನೆನಪಿಗೆ ಬರೋದು ನೂರು ದಿನಗಳ ಆಟ ಎಂಬುದು. ಕೆಲವು ಸೀಸನ್​ಗಳು ಕೇವಲ 98ನೇ ದಿನಕ್ಕೆ ಪೂರ್ಣಗೊಂಡ ಉದಾಹರಣೆ ಇದೆ. ಈ ಬಾರಿ ಸರ್​ಪ್ರೈಸ್ ಇದೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಈಗಾಗಲೇ 80 ದಿನಗಳನ್ನು ಪೂರೈಸಿದೆ. ದೊಡ್ಮನೆ ಆಟ ಇನ್ನು ಕೇವಲ 20 ದಿನ ಉಳಿದಿರೋದು ಅನ್ನೋದು ಅನೇಕರ ಭಾವನೆ. ಮನೆಯಲ್ಲಿ ಇರುವ ಸ್ಪರ್ಧಿಗಳು ಕೂಡ ಇದನ್ನೇ ಅಂದುಕೊಂಡಿದ್ದಾರೆ. ಆದರೆ, ಬಿಗ್ ಬಾಸ್  ಈ ಬಾರಿ 100 ದಿನಕ್ಕೆ ಪೂರ್ಣಗೊಳ್ಳುತ್ತಿಲ್ಲ ಎನ್ನುತ್ತಿವೆ ಮೂಲಗಳು. ಈ ವಿಚಾರ ಕೇಳಿ ವೀಕ್ಷಕರು ಖುಷಿಪಟ್ಟಿದ್ದಾರೆ.

ಬಿಗ್ ಬಾಸ್ ಎಂದಾಗ ತಕ್ಷಣಕ್ಕೆ ನೆನಪಿಗೆ ಬರೋದು ನೂರು ದಿನಗಳ ಆಟ ಎಂಬುದು. ಕೆಲವು ಸೀಸನ್​ಗಳು ಕೇವಲ 98ನೇ ದಿನಕ್ಕೆ ಪೂರ್ಣಗೊಂಡ ಉದಾಹರಣೆ ಇದೆ. ಎಂಟನೇ ಸೀಸನ್ 117 ದಿನಗಳ ಕಾಲ ಇತ್ತು. ಏಳನೇ ಸೀಸನ್ 112 ದಿನ ನಡೆದಿತ್ತು. ಟಿಆರ್​ಪಿ ಉತ್ತಮವಾಗಿದ್ದಾಗ ಹೆಚ್ಚುವರಿಯಾಗಿ ಎರಡು ವಾರ ಬಿಗ್ ಬಾಸ್ ಶೋನ ನಡೆಸಲಾಗುತ್ತದೆ. ಈ ಸೀಸನ್​ನಲ್ಲೂ ಎರಡು ವಾರ ಹೆಚ್ಚುವರಿಯಾಗಿ ನಡೆಸಲು ವಾಹಿನಿ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಈ ಬಾರಿ ಬಿಗ್ ಬಾಸ್ ಟಿಆರ್​ಪಿ ಉತ್ತಮವಾಗಿ ಬರುತ್ತಿದೆ. ಕಳೆದ ವಾರ ಬಂದ ಟಿಆರ್​ಪಿ ಪ್ರಕಾರ ವೀಕೆಂಡ್ ಎಪಿಸೋಡ್​ನಲ್ಲಿ ಬಿಗ್ ಬಾಸ್ 9 ಟಿವಿಆರ್ ಪಡೆದಿದೆ. ಇದು ವಾಹಿನಿಯವರ ಖುಷಿ ಹೆಚ್ಚಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಿಗ್ ಬಾಸ್​ಗೆ ಈ ಮಟ್ಟದ ಟಿಆರ್​ಪಿ ಸಿಕ್ಕಿರಲಿಲ್ಲ. ಈ ಕಾರಣದಿಂದ 14 ದಿನ ಹೆಚ್ಚುವರಿಯಾಗಿ ಶೋ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ಈ ಬಾರಿಯ ಬಿಗ್ ಬಾಸ್​ನಲ್ಲಿ ವಿವಾದಗಳು ಸಾಕಷ್ಟಿದ್ದವು. ವಿನಯ್ ಗೌಡ ಅವರು ಸಾಕಷ್ಟು ಕೂಗಾಟ ನಡೆಸಿದ್ದರು. ಕೆಲವರ ಕಣ್ಣಿಗೆ ಹಾನಿ ಆಯಿತು. ಬಳೆಯ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈ ಎಲ್ಲಾ ಕಾರಣದಿಂದ ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ ಬಾರಿಯ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೊಡುವ ಅವಕಾಶ ಇದೆ.


Comments