ಕಲಬುರಗಿಯಲ್ಲಿ ಹಾಡುಹಗಲೇ ವಕೀಲನ ಬರ್ಬರ ಹತ್ಯೆ
ಕಲಬುರಗಿ ನಗರದ ಸಾಯಿ ಮಂದಿರ ಬಳಿಯಿರುವ ಅಪಾರ್ಚೆಂಚೊಂದರ ಬಳಿ ಹಾಡುಹಗಲೇ ವಕೀಲರೊಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಈರಣ್ಣಾಗೌಡ ಪಾಟೀಲ್ (40) ಎಂಬ ವಕೀಲರ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಜಮೀನು ವಿವಾದದ ಹಿನ್ನೆಲೆಯಲ್ಲಿ ಸಂಬಂಧಿಕರಿಂದಲೇ ಹತ್ಯೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ವಿವಿ ಪೋಲಿಸ್ ಠಾಣೆ ಪೋಲಿಸರು ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ