ಇಂದಿನ ಬೆಳ್ಳುಳ್ಳಿ ಬೆಲೆ ಗೊತ್ತೇ ನಿಮಗೆ?
ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ ಉತ್ಪಾದನೆ ಕುಂಠಿತವಾಗಿದೆ. ಸಗಟು ಮಾರುಕಟ್ಟೆಯಲ್ಲಿ ಸಾಮಾನ್ಯ ಬೆಳ್ಳುಳ್ಳಿಯ ಬೆಲೆ 130ರಿಂದ 140 ರೂ ಆಗಿದೆ. ಉಚ್ಚಗುಣಮಟ್ಟದ ಬೆಳ್ಳುಳ್ಳಿ ಬೆಲೆ 250 ರೂ ಆಗಿದೆ. ಬೆಳ್ಳುಳ್ಳಿ ಬೆಲೆ ರೀಟೇಲ್ ಮಾರುಕಟ್ಟೆಯಲ್ಲಿ ಕಿಲೋಗೆ 300ರಿಂದ 400 ರೂ ಆಗಿದೆ. ಟೊಮೆಟೋ, ಈರುಳ್ಳಿ ಬೆಲೆ ಏರಿಕೆಯ ಬಿಸಿ ತಾಕಿದ ಜನಸಾಮಾನ್ಯರಿಗೆ ಬೆಳ್ಳುಳ್ಳಿ ಬೆಲೆ ಶಾಕ್ ಕೊಟ್ಟಿದೆ.
ಕಳೆದ ಎರಡು, ಮೂರು ತಿಂಗಳಿಂದ ಜನರಿಗೆ ಟೊಮೆಟೋ ಮತ್ತು ಈರುಳ್ಳಿ ಬೆಲೆ ಏರಿಕೆಯ ಬಿಸಿ ತಾಕಿದೆ. ಈಗ ಬೆಳ್ಳುಳ್ಳಿಯ ಸರದಿಯಾಗಿದೆ. ನೋಡನೋಡುತ್ತಿರುವಂತೆಯೇ ಬೆಳ್ಳುಳ್ಳಿ ಬೆಲೆ ಗಗನಕ್ಕೇರತೊಡಗಿದೆ. ಕೆಲ ಪ್ರದೇಶಗಳಲ್ಲಿ ಅದು ಕಿಲೋಗೆ 400 ರೂ ಗಡಿ ದಾಟಿ ಹೋಗಿದೆ. ಟೊಮೆಟೋ ಮತ್ತು ಈರುಳ್ಳಿ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಕಂಗೆಟ್ಟಿರುವುದು ಮಾತ್ರವಲ್ಲ, ಹಣದುಬ್ಬರ ಕೆಳಗಿಳಿಯಲು ಬಿಡದೆ ಸರ್ಕಾರಕ್ಕೂ ತಲೆ ನೋವಾಗಿದೆ. ಈಗ ಬೆಲೆ ಏರಿಕೆಯಲ್ಲಿ ಬೆಳ್ಳುಳ್ಳಿಯೂ ಸೇರಿಕೊಂಡಿದೆ.
ಬೆಳ್ಳುಳ್ಳಿ ಬೆಲೆ ಹೆಚ್ಚಾಗಲು ಕಾರಣವೇನು ಗೊತ್ತೇ?
ಮುಂಗಾರು ಋತುವಿನಲ್ಲಿ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಬಹಳಷ್ಟು ಕಡಿಮೆ ಆಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ ಬಾಧಿತವಾಗಿದೆ. ತಮಿಳುನಾಡು, ಆಂಧ್ರದ ಕರಾವಳಿ ಭಾಗದಲ್ಲಿ ಮಿಚಾಂಗ್ ಚಂಡಮಾರುತದ ಪರಿಣಾಮ ದಕ್ಷಿಣ ಭಾರಗದ ಹಲವು ಭಾಗಗಳಲ್ಲಿ ವಿಪರೀತ ಮಳೆಯಾಗಿ ಬೆಳೆ ನಾಶವಾಗಿದ್ದಿದೆ.
ಸದ್ಯ ಬೆಳ್ಳುಳ್ಳಿಯ ಬೆಲೆ ಕಡಿಮೆ ಆಗುವ ಸಾಧ್ಯತೆ ಇಲ್ಲ ಎಂದು ಎಪಿಎಂಸಿ ವರ್ತಕರು ಹೇಳುತ್ತಿದ್ದಾರೆ. ‘ನಾವೀಗ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದ ಮೇಲೆ ಅವಲಂಬಿತವಾಗಬೇಕಿದೆ. ಇದು ತುಸು ದುಬಾರಿಯಾಗಬಹುದು,’ ಎಂದು ವರ್ತಕರು ಹೇಳುತ್ತಿದ್ದಾರೆ.
Comments
Post a Comment