ಕರುನಾಡಿನಲ್ಲಿ ಜೋರಾಗಿದೆ ಕಾಟೇರ ಕ್ರೇಜ್ ಟಿಕೆಟ್ಗೆ ಫುಲ್ ಡಿಮ್ಯಾಂಡ್
ನಟ ದರ್ಶನ್ ಅಭಿನಯದ ಹಾಗೂ ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಕಾಟೇರ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಕಾಟೇರ ಕ್ರೇಜ್ ಹೆಚ್ಚಾಗಿದ್ದು, ಟಿಕೆಟ್ ಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ದರ್ಶನ್ - ತರುಣ್ ಸುದೀರ್, ರಾಕ್ಲೈನ್ ಕಾಂಬಿನೇಷನ್ ನಲ್ಲಿ ಕಾಟೇರ ಸಿನಿಮಾ ಸಿದ್ಧವಾಗಿದೆ. ೦೦ಸಲಾರ್, ಡಂಕಿ ಸಿನಿಮಾಗಳ ನಡುವೆ ಕನ್ನಡದ ಕಾಟೇರನ ಸಿನಿಮಾ ಕ್ರೇಜ್ ಕೂಡ ಜೋರಾಗಿದ್ದು, ಅಡ್ವಾನ್ಸ್ ಬುಕಿಂಗ್ ಕೂಡ ಶುರುವಾಗಿದೆ.
ಕಾಟೇರ ಟ್ರೈಲರ್ ನೋಡಿದ ಫ್ಯಾನ್ಸ್ ಸಿನಿಮಾ ನೋಡಲು ಕಾಯ್ತಿದ್ರು. ಪ್ರೀರಿಲೀಸ್ ಇವೆಂಟ್ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಮಂಡ್ಯದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
ಕಾಟೇರ ಸಿನಿಮಾದಲ್ಲಿನ ರೈತರ ಹಾಡು ಇದೀಗ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ನನ್ನ ಮಣ್ಣು ನನ್ನ ಹಕ್ಕು ಹಾಡು ಕೇಳಿ ದರ್ಶನ್ ಫ್ಯಾನ್ಸ್ ಫಿದಾ ಆಗಿದ್ದಾರೆ. ರೈತರ ಹೋರಾಟ ಕಥೆಯನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ.
ಬೆಂಗಳೂರಿನಲ್ಲೇ 15 ಥಿಯೇಟರ್ಗಳಲ್ಲಿ ಕಾಟೇರ್ ಸಿನಿಮಾ ಟಿಕೆಟ್ ಗಾಗಿ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಅನೇಕ ಥಿಯೇಟರ್ ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿವೆ. ರಾಕ್ ಲೈನ್ ಮಾಲ್ನಲ್ಲಿ ಮಿಡ್ನೈಟ್ ಶೋ ಟಿಕೆಟ್ ದರ 1000 ರೂ.ಗೆ ಏರಿಸಲಾಗಿದೆ.
ಲಕ್ಷ್ಮೀ ಥಿಯೇಟರ್ನಲ್ಲಿ 500 ರೂ. ಇದೆ. ಇನ್ನು ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ನಲ್ಲಿ ಬೆಳಗ್ಗೆ 5 ಗಂಟೆ ಹಾಗೂ 9.30 ಶೋಗಳು ಸೋಲ್ಡ್ ಔಟ್ ಆಗಿದೆ. ಅನುಪಮಾ ಚಿತ್ರಮಂದಿರದಲ್ಲಿ 6 ಗಂಟೆ ಹಾಗೂ 10.30 ಶೋಗಳು ಸೋಲ್ಡ್ ಔಟ್ ಆಗಿದೆ.
ಫ್ಯಾನ್ಸ್ ಶೋಗಳಿಗೆ ಟಿಕೆಟ್ ದರ ಹೆಚ್ಚಿಸಿದ್ದಾರೆ. ಆದ್ರೂ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಲು ಕಾಯ್ತಿದ್ದಾರೆ. ಸಿನಿಮಾ ಟಿಕೆಟ್ ಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಾಟೇರಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ದರ್ಶನ್ಗೆ ಜೋಡಿಯಾಗಿ ಸ್ಯಾಂಡಲ್ವುಡ್ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ನಟಿಸಿದ್ದಾರೆ. ಇದೇ ತಿಂಗಳ ಡಿಸೆಂಬರ್ 29ರಂದು ಸಿನಿಮಾ ತೆರೆಗೆ ಬರಲಿದೆ.
Comments
Post a Comment