ಬಿಗ್​ಬಾಸ್​ ಮನೆಯೊಳಗೆ ಮೊಬೈಲ್​, ಇದು ನಿಜವೇ

ಬಿಗ್​ಬಾಸ್​ ಮನೆಯೊಳಗೆ ಮೊಬೈಲ್​, ಇದು ನಿಜವೇ?



ಬಿಗ್​ಬಾಸ್​ ಮನೆಯೊಳಗೆ ಮೊಬೈಲ್​, ಇದು ನಿಜವೇ?
ಬಿಗ್​ಬಾಸ್​ ರಿಯಾಟಿಲಿ ಶೋನಲ್ಲಿ ಭಾಗವಹಿಸಬೇಕಾದರೆ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕು. ಒಮ್ಮೆ ದೊಡ್ಮನೆಯೊಳಗೆ ಸೇರಿಕೊಂಡರೆ ಹೊರ ಜಗತ್ತಿಗೂ ಅವರಿಗೂ ಯಾವುದೇ ಕನೆಕ್ಷನ್​ ಇರುವುದಿಲ್ಲ. ಹೊರಗಡೆ ಏನು ನಡೆಯುತ್ತಿರುತ್ತದೆ ಎಂಬುದರ ಅರಿವು ಇರುವುದಿಲ್ಲ.
ಮನೆಯೊಳಗೆ ಮೊಬೈಲ್​​ ಫೋನ್​ ತೆಗೆದುಕೊಂಡು ಹೋಗುವುದಕಂತೂ ಚಾನ್ಸೇ ಇಲ್ಲ. ಮೂರು ತಿಂಗಳ ಕಾಲ ಹೊರಗಿನ ಜಗತ್ತಿನ ಸಂಪರ್ಕವಿಲ್ಲದೆ ಜೈಲಿನಲ್ಲಿ ಬಂಧಿಯಾದಂತೆ ದೊಡ್ಮನೆಯಲ್ಲಿ ಇರಬೇಕು. ಆದರೆ, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋವೊಂದು ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ದೊಡ್ಮನೆಯೊಳಗೆ ಮೊಬೈಲ್​ ಫೋನ್​ ಬಳಸುವ ಅವಕಾಶವಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ.

ವೈರಲ್​ ಆಗಿರುವ ಫೋಟೋದಲ್ಲಿ ಕನ್ನಡಿಯ ಪಕ್ಕದ ಸ್ವಿಚ್​ ಬಾಕ್ಸ್​ನಲ್ಲಿ ಎರಡು ಮೊಬೈಲ್​ ಚಾರ್ಜರ್​ಗಳನ್ನು ಅಳವಡಿಸಲಾಗಿದೆ. ಆದರೆ, ಸಂಗೀತಾ ಮರೆಯಾಗಿರುವುದರಿಂದ ಯಾವುದನ್ನು ಚಾರ್ಜ್​ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಮೊಬೈಲ್​ ಚಾರ್ಜರ್​ ಇರುವುದನ್ನು ವೀಕ್ಷಕರು ಕಂಡುಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಸ್ಕ್ರೀನ್​ಶಾಟ್​ ತೆಗೆದು ಹಳದಿ ಬಣ್ಣದಲ್ಲಿ ಚಾರ್ಜರ್​ ಇರುವ ಕಡೆ ರೌಂಡ್​ ಮಾರ್ಕ್​ ಮಾಡಿ, ಜಾಲತಾಣದಲ್ಲಿ ಹರಿಬಿಟ್ಟು, ಬಿಗ್​ಬಾಸ್​ನಲ್ಲಿ ಮೊಬೈಲ್​ ಬಳಕೆಗೂ ಅವಕಾಶವಿದೆ ಎಂದು ಚರ್ಚಿಸುತ್ತಿದ್ದಾರೆ.
ಟ್ರೋಲ್​ ಪೇಜ್​ಗಳಂತೂ ಈ ಫೋಟೋ
ಈ ಹಿಂದೆ ಬಿಗ್​ಬಾಸ್​ ಮನೆಯೊಳಗೆ ಸ್ಮೋಕಿಂಗ್​ಗೆ ಅವಕಾಶ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಸ್ಪರ್ಧಿಗಳು ಸ್ಮೋಕಿಂಗ್​ ಮಾಡುವ ವಿಡಿಯೋ ವೈರಲ್​ ಆದ ಬಳಿ, ದೊಡ್ಮನೆಯೊಳಗೆ ಪ್ರತ್ಯೇಕವಾಗಿ ಸ್ಮೋಕಿಂಗ್​ ಜೋನ್​ ಕೂಡ ಇದೆ ಎಂಬುದು ಬಯಲಾಗಿತ್ತು.
ಇದೀಗ ಮೊಬೈಲ್​ ಚಾರ್ಜರ್​ ಇರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದು ನಿಜನಾ? ಅಥವಾ ತಿರುಚಿದ ಫೋಟೋನಾ? ಎಂದು ರಿಯಾಲಿಟಿ ಶೋ ಆಯೋಜಕರೇ ಸ್ಪಷ್ಟನೆ ನೀಡಬೇಕಾಗಿದೆ.

Comments