ಇವರೇ ನೋಡಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರು..!

 ಇವರೇ ನೋಡಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರು 

ಬಿಗ್ ಬಾಸ್​ನಲ್ಲಿ ಪ್ರತಿ ವಾರ ಒಂದು ಎಲಿಮಿನೇಷನ್ ನಡೆಯುತ್ತದೆ. ಕಳೆದ ವಾರ ರಕ್ಷಕ್ ಅವರು ದೊಡ್ಮನೆಯಿಂದ ಔಟ್ ಆಗಿದ್ದರು. ಈ ವಾರ ಬಿಗ್ ಬಾಸ್​ ಮನೆಯಿಂದ ಯಾರು ಹೊರ ಹೋಗುತ್ತಾರೆ ಅನ್ನೋ ಕುತೂಹಲ ಮೂಡಿದೆ. ಹಲವರ ಮೇಲೆ ಎಲಿಮಿನೇಷನ್ ತೂಗುಗತ್ತಿ ಇದೆ.

ಸತ್ತ ನಂತರ ಮೂಗು ಮತ್ತು ಕಿವಿಯಲ್ಲಿ ಹತ್ತಿಯನ್ನು ಏಕೆ ಇಡುತ್ತಾರೆ ಗೊತ್ತಾ


ಈಶಾನಿ, ನಮ್ರತಾ ಗೌಡ, ಸ್ನೇಹಿತ್, ನೀತು ವನಜಾಕ್ಷಿ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಮಹೇಶ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಜಿಯೋ ಸಿನಿಮಾದಲ್ಲಿ ವೋಟ್ ಮಾಡೋಕೆ ಅವಕಾಶ ಇದೆ. ಅನೇಕರು ಈಶಾನಿ ಅಥವಾ ನೀತು ಮನೆಯಿಂದ ಹೊರ ಹೋಗಬಹುದು ಎಂದು ಊಹಿಸುತ್ತಿದ್ದಾರೆ.

ಯಮಲೋಕ ಎಷ್ಟು ದೂರವಿದೆ | ಸತ್ತ ನಂತರ ಏನೆಲ್ಲಾ ಆಗುತ್ತದೆ 

ಆದರೆ, ಊಹೆ ತಪ್ಪಾಗಬಹುದು ಎನ್ನುತ್ತಿವೆ ಸ್ಪರ್ಧಿಗಳು ಆಡಿದ ಮಾತು. ತುಕಾಲಿ ಸಂತೋಷ್ ಬಳಿ ಮಾತನಾಡಿದ್ದ ವರ್ತೂರು ಸಂತೋಷ್, ‘ನಾನ್ ಬಿಡು.. ನಂಗೆ ಹೋಗೋದು ಅನಿವಾರ್ಯ ಆಗಿದೆ’ ಎಂದಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ಅನುಮಾನ ಮೂಡಿಸಿದೆ.

ಬಾಬಾ ವಂಗಾ ನುಡಿದ 2023ರ ಭವಿಷ್ಯ ನಿಜವಾಯ್ತು | ಭಯಾನಕವಾಗಿದೆ 2024ರ ಭವಿಷ್ಯ



ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ವರ್ತೂರು ಸಂತೋಷ್ ಅವರು ಇತ್ತೀಚೆಗೆ ಅರೆಸ್ಟ್ ಆದರು. ಬಿಗ್ ಬಾಸ್​ನಲ್ಲಿ ಇದ್ದಾಗಲೇ ಅವರ ಬಂಧನಕ್ಕೆ ಆದೇಶ ಬಂತು. ಹೊರಗೆ ಕರೆತಂದು ಅವರ ಬಂಧಿಸಲಾಯಿತು. ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಜಾಮೀನು ಪಡೆದ ಹೊರ ಬಂದ ಅವರು ಮರಳಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರಿಗೆ ಈಗ ಹೊರಗೆ ಬರೋ ಅನಿವಾರ್ಯತೆ ಮೂಡಿದೆಯೇ ಎನ್ನುವ ಪ್ರಶ್ನೆ ಕಾಡಿದೆ.
ಈ ವರೆಗೆ ಬಂದಿರುವ ಮಾಹಿತಿಯ ಪ್ರಕಾರ ಈ ವಾರ ಈಶಾನಿ ಅಥವಾ ನೀತು ಮನೆಯಿಂದ ಹೊರ ಹೋಗಬಹುದು ಅಥವಾ ಇಬ್ಬರು ಹೋಗಬಹುದು.. ನಿಮ್ಮ ಅನಿಸಿಕೆ ಏನು ಈ ವಾರ ಯಾರು ಮನೆಯಿಂದ ಹೊರಹೋಗಬಹುದು.. ಕಾಮೆಂಟ್ ಮಾಡಿ 




Comments