ಯಮಲೋಕ ಎಷ್ಟು ದೂರವಿದೆ ಸತ್ತ ನಂತರ ಏನೆಲ್ಲಾ ಆಗುತ್ತದೆ.
ಗರುಡ ಪುರಾಣದಲ್ಲಿ ಸಾವು ಮತ್ತು ಜನನದ ಕುರಿತು ಸಾಕಷ್ಟು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಮರಣದ ನಂತರ ಆತ್ಮವು ಹೇಗೆ ಯಮಲೋಕವನ್ನು ಸೇರುತ್ತದೆ ಎಂಬುದನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಗರುಡ ಪುರಾಣದ ಪ್ರಕಾರ, ಸಾವಿನ ಸಮಯದಲ್ಲಿ ಆ ವ್ಯಕ್ತಿಗೆ ತಾನು ಮಾತನಾಡಬೇಕೆನಿಸಿದರೂ, ಚಲಿಸಬೇಕೆನಿಸಿದರೂ ಅದು ಅವನಿಂದ ಸಾಧ್ಯವಾಗುವುದಿಲ್ಲ. ಅವನು ತನ್ನ ಕುಟುಂಬದ ಸದಸ್ಯರೊಂದಿಗೆ ತನಗಾಗುವ ಸಂಕಟವನ್ನು ಹೇಳಿಕೊಳ್ಳಲು ಬಯಸುತ್ತಾನೆ. ಆದರೆ, ಅದು ಅವನಿಗೆ ಸಾಧ್ಯವಾಗುವುದಿಲ್ಲ. ಆತ್ಮವು ಆ ವ್ಯಕ್ತಿಯ ದೇಹವನ್ನು ತೊರೆಯುತ್ತಿದ್ದಂತೆ ಇಬ್ಬರು ಯಮದೂತರು ಬಂದು ಆತ್ಮವನ್ನು ಹಿಡಿದುಕೊಂಡು ಯಮಲೋಕಕ್ಕೆ ತೆಗೆದುಕೊಂಡು ಹೋಗುತ್ತಾರೆ.
ವಿಡಿಯೋ ನೋಡಿ:
ಮರಣ ಹೊಂದಿದ ವ್ಯಕ್ತಿಯ ಆತ್ಮವನ್ನು ಯಮದೂತರು ಯಮಲೋಕಕ್ಕೆ ಕರೆದುಕೊಂಡು ಹೋಗುವ ಮೊದಲು ಅದನ್ನು ಹೆದರಿಸುತ್ತಾರೆ. ಆ ಆತ್ಮಕ್ಕೆ ನರಕದಲ್ಲಿ ಯಾವೆಲ್ಲಾ ನೋವುಗಳನ್ನು ನೀಡಲಾಗುತ್ತದೆ ಎಂಬುದರ ಕುರಿತು ಹೇಳುತ್ತಾರೆ. ಯಮದೂತರು ಹೇಳುವ ಈ ವಿಚಾರಗಳನ್ನು ಕೇಳಿ ಆ ಆತ್ಮವು ಅಳಲು ಪ್ರಾರಂಭಿಸುತ್ತದೆ. ಆದರೆ, ಯಮದೂತರು ಆ ಆತ್ಮದ ಬಗ್ಗೆ ಯಾವುದೇ ರೀತಿಯಾದ ಕರುಣೆಯನ್ನು ತೋರುವುದಿಲ್ಲ.
ಯಮಲೋಕಕ್ಕೆ ಹೋಗುವ ಮಾರ್ಗದಲ್ಲಿ ಕಲ್ಲು, ಮುಳ್ಳು, ಬೆಂಕಿ ಮುಂತಾದ ಕಠಿಣವಾದ ಮಾರ್ಗಗಳಿರುತ್ತವೆ. ಈ ಮಾರ್ಗದ ಮೂಲಕ ಆತ್ಮಕ್ಕೆ ಬಿಸಿ ಗಾಳಿಯನ್ನು ಎದುರಿಸಿ, ಬಿಸಿ ಮರಳಿನ ಮೇಲೆ ನಡೆಯಲು ಸಾಧ್ಯವಾಗುವುದಿಲ್ಲ. ಹಸಿವು ಮತ್ತು ಬಾಯಾರಿಕೆಯಿಂದ ಆತ್ಮವು ನೋವನ್ನು ಅನುಭವಿಸುತ್ತದೆ. ತನ್ನ ಪ್ರಯಾಣವನ್ನು ನಿಧಾನವಾಗಿಸುತ್ತದೆ. ಇದನ್ನು ಕಂಡ ಯಮದೂತರು ಕೋಪಗೊಂಡು ಆ ಆತ್ಮಕ್ಕೆ ಚಾಟಿಯಿಂದ ಹೊಡೆಯಲು ಪ್ರಾರಂಭಿಸುತ್ತಾರೆ.
ಯಮಲೋಕವು ಭೂಮಿಯಿಂದ 99 ಸಾವರ ಕಿಲೋಮೀಟರ್ ದೂರದಲ್ಲಿದೆ ಎಂದು ಗರುಡ ಪುರಾಣ ಹೇಳುತ್ತದೆ. ಈ ಪ್ರಯಾಣದ ಮೂಲಕವೇ ಯಮದೂತರು ಆತ್ಮವನ್ನು ಯಮನು ಶಿಕ್ಷಿಸುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ಆ ಆತ್ಮವು ಯಮರಾಜನ ಆದೇಶದ ಮೇರೆಗೆ ದೂತರೊಂದಿಗೆ ತನ್ನ ಮನೆಯನ್ನು ಪ್ರವೇಶಿಸುತ್ತದೆ. ಆತ್ಮದ ಈ ಸುದೀರ್ಘ ಪ್ರಯಾಣದಲ್ಲಿ ಯಮದೂತರು ಅದರೊಂದಿಗೆ ಇರುತ್ತಾರೆ.
ಯಮದೂತರೊಂದಿಗೆ ಮನೆಯನ್ನು ಹಿಂದಿರುಗಿ ಪ್ರವೇಶಿಸಿದ ಆತ್ಮವು ತನ್ನ ದೇಹವನ್ನು ಮತ್ತೆ ಸೇರಲು ಬಯಸುತ್ತದೆ. ಆದರೆ ಯಮದೂತರು ಅದನ್ನು ಪುನಃ ದೇಹವನ್ನು ಸೇರಲು ಬಿಡುವುದಿಲ್ಲ. ಹಸಿವು - ಬಾಯಾರಿಕೆಯಿಂದ ಅಳಲು ಪ್ರಾರಂಭಿಸುತ್ತದೆ. ಪಿಂಡದಾನ ಮಾಡುವವರೆಗೂ ಇಂತಹ ಆತ್ಮಗಳು ತೃಪ್ತಿಯನ್ನು ಹೊಂದುವುದಿಲ್ಲ. ಈ ಸಮಯದಲ್ಲಿ ಕುಟುಂಬದವರು ಆತ್ಮಕ್ಕೆ ಪಿಂಡದಾನ ಮಾಡದಿದ್ದರೆ ಆತ್ಮ ಪ್ರೇತವಾಗುತ್ತದೆ. ಈ ಕಾರಣಕ್ಕಾಗಿ ಮರಣದ ನಂತರ 10 ದಿನಗಳವರೆಗೆ ಪಿಂಡದಾನವನ್ನು ಮಾಡಬೇಕೆಂದು ಹೇಳಲಾಗುತ್ತದೆ. ಪಿಂಡದಾನದಿಂದ ಮಾತ್ರ ಆತ್ಮವು ಚಲಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ.
ಹೀಗೆ ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಿರುವ ಆತ್ಮವು ಏಕಾಂಗಿಯಾಗಿ ಯಮಲೋಕವನ್ನು ಸೇರುತ್ತದೆ. ವೈತರಣಿ ನದಿಯನ್ನು ಹೊರತು ಪಡಿಸಿ ಯಮಲೋಕವನ್ನು ತಲುಪುವ ಮಾರ್ಗವು 86 ಸಾವಿರ ಯೋಜನೆಗಳನ್ನು ಒಳಗೊಂಡಿರುತ್ತದೆ ಎನ್ನುವ ಉಲ್ಲೇಖವಿದೆ. ಗರುಡ ಪುರಾಣದ ಪ್ರಕಾರ, 47 ದಿನಗಳ ಕಾಲ ನಿರಂತರವಾಗಿ ನಡೆದ ನಂತರ ಆತ್ಮವು ಯಮಲೋಕವನ್ನು ತಲುಪುತ್ತದೆ. ಅಲ್ಲಿ ಯಮರಾಜನು ಆತ್ಮವನ್ನು ಶಿಕ್ಷಿಸುತ್ತಾನೆ. ಮರಣದ ಬಳಿಕ ಆತ್ಮವು ತನ್ನ ಪ್ರಯಾಣವನ್ನು ಈ ರೀತಿಯಲ್ಲಿ ಪೂರ್ಣಗೊಳಿಸುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
Comments
Post a Comment