ಮಾಟ ಮಂತ್ರಗಳ ಕ್ಯಾಪಿಟಲ್ ಆಫ್ ಇಂಡಿಯಾ ಕೊಳ್ಳೇಗಾಲ ಅಲ್ಲವೇ ಅಲ್ಲ ಆ ಹಳ್ಳಿ ಯಾವುದು? ಎಲ್ಲಿದೆ?
ಈ ಗ್ರಾಮವನ್ನು ಭಾರತದ “ಬ್ಲ್ಯಾಕ್ ಮ್ಯಾಜಿಕ್ ಕ್ಯಾಪಿಟಲ್ ಆಫ್ ಇಂಡಿಯಾ” ಎಂದು ಕರೆಯಲಾಗುತ್ತದೆ. ಹಾಗಾದರೆ ಆ ಗ್ರಾಮ ಯಾವುದು ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ಇದೆ ನೋಡಿ..
ಮಾಟಮಂತ್ರವನ್ನು ಈಗಲೂ ರೂಢಿಸಿಕೊಂಡು ಬರುತ್ತಿರುವ ಹಲವಾರು ಸ್ಥಳಗಳು ನಮ್ಮ ಭಾರತ ದೇಶದಲ್ಲಿವೆ. ಅವುಗಳನ್ನು ಆಂಗ್ಲ ಭಾಷೆಯಲ್ಲಿ ಬ್ಲ್ಯಾಕ್ ಮ್ಯಾಜಿಕ್ ಎಂದೇ ಕರೆಯುತ್ತಾರೆ.
ನಮ್ಮ ಭಾರತದಲ್ಲಿ ಮಾಯಾಂಗ್ ಗ್ರಾಮವನ್ನು “ಬ್ಲ್ಯಾಕ್ ಮ್ಯಾಜಿಕ್ ಕ್ಯಾಪಿಟಲ್ ಆಫ್ ಇಂಡಿಯಾ” ಎಂದು ಕರೆಯಲಾಗುತ್ತದೆ. ಇದು ಅಸ್ಸಾಂ ರಾಜ್ಯದ ಮೋರಿಗಾಂವ್ ಜಿಲ್ಲೆಯಲ್ಲಿ ಬ್ರಹ್ಮಪುತ್ರ ನದಿಯ ದಡದಲ್ಲಿರುವ ಒಂದು ಪುಟ್ಟ ಹಳ್ಳಿಯಾಗಿದೆ. ಅಸ್ಸಾಂನ ವಿಲಕ್ಷಣವಾದ ಈ ಹಳ್ಳಿಯಲ್ಲಿನ ಮಕ್ಕಳಿಗೂ ಈ ಮಾಟಮಂತ್ರದ ಬಗ್ಗೆ ಅರಿವು ಇದೆ.
ಮಾಯಾಂಗ್ ಗ್ರಾಮವು ಒಂದು ವಿಲಕ್ಷಣವಾದ ಗ್ರಾಮವಾಗಿದ್ದು, ದೆವ್ವ, ಭೂತದ ಪರಿಕಲ್ಪನೆವುಳ್ಳವರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ.
ಅಸ್ಸಾಂನ ಈ ಮಾಯಾಂಗ್ ಗ್ರಾಮದ ಅರ್ಧಕ್ಕಿಂತ ಹೆಚ್ಚು ಜನರು ಮಾಟಮಂತ್ರದ ವಿದ್ಯೆಯಲ್ಲಿ ಪರಿಣಿತರಾಗಿದ್ದಾರೆ. ಇದಲ್ಲದೆ, ಒಟ್ಟಿಗೆ ಒಂದೇ ಸೂರಿನಡಿ ಅಭ್ಯಾಸ ಮಾಡುತ್ತಾರೆ.
ಇನ್ನು, ಈ ಗ್ರಾಮದ ಸ್ಥಳೀಯರು ಹಸ್ತ ರೇಖೆಯನ್ನು ಸಹ ಓದುತ್ತಾರೆ. ಹಿಂದೆ ನಡೆದ ಮತ್ತು ಮುಂದೆ ನಡೆಯುವ ಎಲ್ಲಾ ಘಟನೆಗಳನ್ನು ಹೇಳುತ್ತಾರೆ.
ಒಬ್ಬ ವ್ಯಕ್ತಿಯ ಭವಿಷ್ಯವನ್ನು ಒಡೆದ ಗಾಜಿನ ತುಂಡು ಮತ್ತು ಚಿಪ್ಪುಗಳ ಮೂಲಕ ಸವಿವರವಾಗಿ ಹೇಳುವ ಶಕ್ತಿ ಇವರಿಗಿದೆ.
ವ್ಯಕ್ತಿಯ ಕಾಯಿಲೆಗಳನ್ನು ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆ ಇಲ್ಲದೆ ತಮ್ಮ ಮಾಟಮಂತ್ರದಿಂದ ಗುಣಪಡಿಸುತ್ತಾರೆ. ಯಾವುದೇ ನೋವನ್ನು ಕ್ಷಣಾರ್ಧದಲ್ಲಿ ಒಂದು ತಾಮ್ರದ ತಗಡಿನ ಮೂಲಕ ನೋವು ನಿವಾರಿಸುತ್ತಾರೆ.
ಇಂತಹ ಅದ್ಭುತವಾದ ವಿದ್ಯೆ ಮತ್ತು ಶಕ್ತಿಯು ತಲೆಮಾರುಗಳಿಂದ ಬಂದಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ. ಇದಕ್ಕೆಲ್ಲಾ ದೆವ್ವಗಳು ಸಹಾಯ ಮಾಡುತ್ತವೆ ಎಂದು ಅವರು ಹೇಳುತ್ತಾರೆ.
ಮಾಟಮಂತ್ರದಂತಹ ಚಟುವಟಿಕೆಗಳಿಂದಾಗಿ ಈ ಗ್ರಾಮವು ಪ್ರಸ್ತುತ ಪ್ರವಾಸಿ ಸ್ಥಳವಾಗಿ ಬದಲಾಗುತ್ತಿದೆ. ನೀವು ಇತಿಹಾಸ ಅಥವಾ ಸಾಹಸ ಪ್ರಿಯರಾಗಿದ್ದರೆ ಒಮ್ಮೆ ಮಾಯಾಂಗ್ ಗ್ರಾಮಕ್ಕೆ ಭೇಟಿ ನೀಡಬಹುದು.
ಇದನ್ನು ಹೊರತುಪಡಿಸಿ, ಹಳ್ಳಿಯು ಹಲವಾರು ಕಲಾಕೃತಿಗಳು ಮತ್ತು ಪುರಾತತ್ತ್ವ ಅವಶೇಷಗಳನ್ನು ಹೊಂದಿದೆ.
ಇಲ್ಲಿರುವ ಮಿಯಾಂಗ್ ಸೆಂಟ್ರಲ್ ಮ್ಯೂಸಿಯಂ ಮತ್ತು ಎಂಪೋರಿಯಂನಲ್ಲಿ ಪುರಾತನ ಆಯುರ್ವೇದ ಮತ್ತು ಮಾಟ ಮಂತ್ರದ ಕುರಿತಾದ ಆಸಕ್ತಿಕರ ಪುಸ್ತಕಗಳಿವೆ.
ಮಾಯಾಂಗ್ ತಲುಪುವ ಬಗೆ ಹೇಗೆ?
ಮಾಯಾಂಗ್‌ನ ಸಮೀಪದಲ್ಲಿ ಪೊಬಿಟೋರಾ ವನ್ಯಜೀವಿ ಅಭಯಾರಣ್ಯವಿದೆ. ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಏಕ ಕೊಂಬಿನ ಘೇಂಡಾಮೃಗಗಳನ್ನು ಹೊಂದಿದೆ. ಇಷ್ಟೇ ಅಲ್ಲ, ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಮಾಯಾಂಗ್ ಪೊಬಿಟೋರಾ ಉತ್ಸವವನ್ನು ನಡೆಸಲಾಗುತ್ತದೆ.
ಇನ್ನು ಈ ವಿಲಕ್ಷಣ ಮಾಯಾಂಗ್ ಗ್ರಾಮವು ಗುವಾಹಟಿಯಿಂದ 40 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣ ಕೂಡ ಗುವಾಹಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
ದೇಶದ ಮೊದಲ ರೈಲು, ಮೊದಲ ನಿಲ್ದಾಣ ಯಾವುದು ಗೊತ್ತಾ? | indian first railway
Comments
Post a Comment